Uncategorized
ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಂದು ತಾಕೀತು ನೀಡಿದ್ರೂ ಡೋಂಟ್ ಕೇರ್

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಂಗಳ ತಲುಪಿದ ಬಾಗಲಕೋಟೆ ಬಿಜೆಪಿ ಬಣ ಬಡಿದಾಟ..!!!
ನಾನಾ… ನೀನಾ.. ಅಂತಿರೋ ಇಬ್ಬರು ನಾಯಕರ ಮಧ್ಯೆ ತಾರಕಕ್ಕೇರಿದ ಮುಸುಕಿನ ಗುದ್ದಾಟ ಪರಸ್ಪರ ದೂರಿನ ಬೆನ್ನಲ್ಲೆ ಬಾಗಲಕೋಟೆ ಜಿಲ್ಲಾಧ್ಯಕ್ಷರಿಗೆ ಮಾಹಿತಿ ಕೇಳಿದ ರಾಜ್ಯ ಶಿಸ್ತು ಸಮಿತಿ
ಬಾಗಲಕೋಟೆ ಬಿಜೆಪಿಯ ಹಾಲಿ, ಮಾಜಿ ಶಾಸಕರ ಬಣ ಬಡಿದಾಟ ಪರಾಕಾಷ್ಠೆಗೆ ತಲುಪಿದ್ದು, ಬಣ ಬಡಿದಾಟದ ಚೆಂಡು ಈಗ ಪಕ್ಷದ ರಾಜ್ಯ ಶಿಸ್ತು ಸಮಿತಿ ಅಂಗಳದಲ್ಲಿ ಬಿದ್ದಿದೆ. ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರು ತಮ್ಮ ವಿರುದ್ಧ ಅವಮಾನಕರವಾಗಿ ಮಾತನಾಡಿರುವ ಪಕ್ಷದ ಕೆಲ ಪದಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಪೂಜಾರ್ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಶಿಸ್ತು ಸಮಿತಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಬೆಳವಣಿಗೆಳ ಕುರಿತಂತೆ ವರದಿ ಕಳುಹಿಸುವಂತೆ ಸೂಚನೆ ನೀಡಿದೆ. ಇದು ಜಿಲ್ಲಾ ಬಿಜೆಪಿಯಲ್ಲಿ ಭಾರಿ ಕುತೂಹಲಕ್ಕೆ ಕಾರಣ ವಾಗಿದೆ. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ನಡುವಿನ ರಾಜಕೀಯ ತಿಕ್ಕಾಟ ಹಾವು-ಏಣಿಯಾಟದಂತೆ ನಡೆದಿದೆ. ಪರಸ್ಪರರ ನಡುವೆ ತೀರಾ ವೈಯಕ್ತಿಕ ಮಟ್ಟದಲ್ಲಿ ಆರೋಪ, ಪ್ರತ್ಯಾರೋಪಗಳು ನಡೆಯುತ್ತಲೇ ಇವೆ.
ಈಗ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ್ ಅವರು ಮಾಧ್ಯಮಗೋಷ್ಟಿ ನಡೆಸಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದನ್ನು ಖಂಡಿಸಿದರು.
ಈ ವೇಳೆ ಚರಂತಿಮಠ ಅವರ ಕೆಲ ಬೆಂಬಲಿಗರು ಪಿ.ಎಚ್. ಪೂಜಾರ್ ಅವರ ಹೇಳಿಕೆಗಳನ್ನು ತರಾಟೆಗೆ ತೆಗೆದುಕೊಂಡು, ಚರಂತಿಮಠರ ವಿರುದ್ಧ ಏಕವಚನದಲ್ಲಿ ಮಾತನಾಡುವುದನ್ನು ಮುಂದುವರಿಸಿದಲ್ಲಿ ಅವರದೇ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಹೇಳುವ ಜತೆಗೆ ಪೂಜಾರ್ ಅವರನ್ನು ಅಪಮಾನಿಸುವ ನಿಟ್ಟಿನಲ್ಲಿ ಮಾತನಾಡಿ, ಪಕ್ಷದಿಂದ ಹೊರಹಾಕುವಂತೆ ಆಗ್ರಹಿಸಿದ್ದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಬೆಂಬಲಿಗರು ತಮ್ಮ ವಿರುದ್ಧ ಅಪಮಾನ ಕರವಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರಿಗೆ ದೂರ ಸಲ್ಲಿಸಿದ್ದಾರೆ.
ಸೂಕ್ತ ಕ್ರಮಕ್ಕೆ ದೂರು ಸಲ್ಲಿಸಿರುವುದನ್ನು ಸ್ವತಃ ವಿಧಾನ ಪರಿಷತ್ ಸದಸ್ಯ ಪಿ. ಪೂಜಾರ್ ಖಚಿತ ಪಡಿಸಿದ್ದಾರೆ. ಅವಮಾನಕರ ರೀತಿಯಲ್ಲಿ ಚರಂತಿ ಮಠ ಬೆಂಬಲಿಗರು ಮಾತನಾಡಿರುವ ಬಗೆಗೆ ವರದಿ ಸಲ್ಲಿಸುವಂತೆ ರಾಜ್ಯ ಶಿಸ್ತು ಸಮಿತಿ ವರದಿ ಕೇಳಿರುವುದು ನಿಜ. ಸಂಬಂಧಪಟ್ಟವರೊಂದಿಗೆ ಮಾತ ನಾಡಿ ಎರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಎರಡ್ಮೂರು ದಿನದಲ್ಲಿ ಮಾಹಿತಿ ನೀಡಲು ಮುಂದಾದ ಬಿಜೆಪಿ ಜಿಲ್ಲಾಧ್ಯಕ್ಷ ಪಾಟೀಲ ಮುಂದಾಗಿದ್ದಾರೆ.