ಬೆಳಗಾವಿ
ಐ.ಸಿ.ಯುನಲ್ಲಿದ್ದ ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ… ಬೆಳಗಾವಿ ಬಿಮ್ಸ್’ನಲ್ಲಿ ಮಹಿಳೆ ಸಾವು!!!?

ಬೆಳಗಾವಿ: ತುರ್ತು ಪರಿಸ್ಥಿತಿಯ ವೇಳೆ ಚಿಕಿತ್ಸೆ ನೀಡಲು ವೈದ್ಯರು ನರ್ಸಗಳಿಲ್ಲದ ಹಿನ್ನೆಲೆ ಮಹಿಳಾ ರೋಗಿಯೊಬ್ಬರು ತಡರಾತ್ರಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಬೆಳಗಾವಿಯ ವಿಶ್ವೇಶ್ವರಯ್ಯಾ ನಗರ, ಸಂಪಿಗೆ ರಸ್ತೆಯ ರಹಿವಾಸಿ ಪ್ರಭಾವತಿ ವಿಷ್ಣು ಮೀರಜ್’ಕರ ಅವರನ್ನು ಮೇ 19 ರಂದು ಆರೋಗ್ಯದಲ್ಲಿ ಏರುಪೇರಾದ ಕಾರಣ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಲಾಗಿತ್ತು. ಆದರೇ, ಮಂಗಳವಾರ ರಾತ್ರಿ ಅವರ ಆರೋಗ್ಯದಲ್ಲಿ ಇನ್ನಷ್ಟು ಏರುಪೇರು ಉಂಟಾದಾಗ ಚಿಕಿತ್ಸೆ ನೀಡಲು ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ನರ್ಸ್’ಗಳು ಇಲ್ಲದೇ, ಪ್ರಭಾವತಿ ವಿಷ್ಣು ಮೀರಜಕರ ಕೊನೆಯುಸಿರೆಳೆದಿದ್ದಾರೆ. ಬಿಮ್ಸ್ ಆಸ್ಪತ್ರೆಯ ನಿರ್ಲಕ್ಷತನಕ್ಕೆ ಮೀರಜ್’ಕರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.