Uncategorizedರಾಜಕೀಯರಾಜ್ಯ

ಬೈಲಹೊಂಗಲ ಕಳ್ಳನ ಬಂಧನ: ರೂ. 4 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ.

ಬೈಲಹೊಂಗಲ: ಬೈಲಹೊಂಗಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ಆತನಿಂದ ರೂ. 4 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿಯ ಆಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಸವದತ್ತಿ ತಾಲ್ಲೂಕಿನ ಗುರ್ಲಹೊಸೂರ ಗ್ರಾಮದ ಅಭಿ ಮಹಾದೇವ ಗೊಂಧಳಿ (20) ಬಂಧಿತ ಆರೋಪಿ.

ಪಟ್ಟಣದ ಶಿವಾನಂದ ಭಾರತಿ ನಗರ, ಶಿವಬಸವ ನಗರ ಹಾಗೂ ಬೈಲವಾಡ ಗ್ರಾಮದ ಮೂರು ಮನೆ ಕಳ್ಳತನವಾಗಿತ್ತು. ಈ ಕುರಿತು ದೂರು ದಾಖಲಾಗಿತ್ತು.ಆರೋಪಿತನಿಂದ ರೂ. 4 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು ಹಾಗೂ ನಗದು ವಶಪಡಿಸಿಕೊಂಡಿದ್ದು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಆರೋಪಿತನ ಪತ್ತೆ ಮಾಡಲು ಜಿಲ್ಲಾ ಎಸ್ಪಿ ಡಾ ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ಪಿ ಶೃತಿ ಕೆ, ಆರ್ ಬಿ ಬಸರಗಿ, ಡಿ ವೈ ಎಸ್ ಪಿ ರವಿ ನಾಯ್ಕ, ಪಿ ಐ ಪಂಚಾಕ್ಷರಿ ಸಾಲಿಮಠ ಅವರ ಮಾರ್ಗದರ್ಶನದಲ್ಲಿ ಪಿ ಎಸ್ ಐ ಮುರನಾಳ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.ವೈಜ್ಞಾನಿಕ ತನಿಖಾ ವಿಧಾನ ಬಳಸಿಕೊಂಡು ಆರೋಪಿತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸಿಬ್ಬಂದಿಗಳಾದ ಶಂಕರ ಮೆಣಸಿನಕಾಯಿ, ಜೆ ಆರ್ ಮಳಗಲಿ, ಎಂ ಎಸ್ ದೇಶನೂರ, ಚೇತನ ಬುದ್ನಿ, ಕೆ ಎಫ್ ವಕ್ಕುಂದ, ಸಚಿನ ಪಾಟೀಲ, ವಿನೋದ ಠಕ್ಕನ್ನವರ, ಸೋಮು ಕರವೀರ ನವರ, ಮಂಜುನಾಥ ಕರಿಗಾರ ಇದ್ದರು. ಪೊಲೀಸರ ಈ ಕಾರ್ಯಕ್ಕೆ ಎಸ್ಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button