ರಾಜಕೀಯರಾಜ್ಯಶಿವಮೊಗ್ಗ

ಆಪರೇಷನ್​​​​ ಸಿಂಧೂರ ಬಗ್ಗೆ ಸ್ಟೇಟಸ್: ಶಿವಮೊಗ್ಗದಲ್ಲಿ ವ್ಯಕ್ತಿ ವಿರುದ್ಧ ಪ್ರಕರಣ

ಶಿವಮೊಗ್ಗ: ಭಾರತದ ಆಪರೇಷನ್​​​​ ಸಿಂಧೂರ ಕಾರ್ಯಾಚರಣೆ ಬಗ್ಗೆ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್​​ ಹಾಕಿಕೊಂಡಿದ್ದ ​ವ್ಯಕ್ತಿಯ ವಿರುದ್ಧ ಇಲ್ಲಿನ ಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಕ್​ನಲ್ಲಿನ ಉಗ್ರರ ನೆಲೆಗಳ ಮೇಲೆ ಆಪರೇಷನ್​​​​​​ ಸಿಂಧೂರ ಹೆಸರಿನಲ್ಲಿ ಮೇ 7ರಂದು ಭಾರತೀಯ ಸೇನಾಪಡೆಗಳು ದಾಳಿ ನಡೆಸಿದ್ದವು. ಈ ವೇಳೆ, ದಾಳಿ ಸಂಬಂಧಿಸಿದ ವಿಡಿಯೋ ತುಣಕನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ ಆರೋಪದ ಮೇಲೆ ಶಿವಮೊಗ್ಗದ ಇಬ್ಬು ಅಲಿಯಾಸ್​​ ಇಬ್ರಾಹಿಂ ಖಾನ್​​​ ಎಂಬಾತನ ವಿರುದ್ಧ ಕೇಸ್​ ದಾಖಲಾಗಿದೆ.

ಕೋಟೆ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್ ಪ್ರಕಾಶ್​ ಎಂಬವರು ಇಬ್ಬು ಅಲಿಯಾಸ್ ಇಬ್ರಾಹಿಂ ವಿರುದ್ದ ದೂರು ನೀಡಿದ್ದಾರೆ. ಭಾರತ ದೇಶದ ಪ್ರಜೆಯಾಗಿ, ದೇಶದ ರಕ್ಷಣೆ ಪಡೆದು ಪಾಕಿಸ್ತಾನದ ಪರವಾಗಿ ದೇವರಲ್ಲಿ ಬೇಡಿಕೊಂಡಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕಾನ್ಸ್​ಟೇಬಲ್ ನೀಡಿದ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.

Related Articles

Leave a Reply

Your email address will not be published. Required fields are marked *

Back to top button