
ಬಾಗಲಕೋಟೆ : ನಿರಂತರ ಮಳೆಯಿಂದಾಗಿ ಜಮಖಂಡಿ ತಾಲೂಕಿನ ಜಕನೂರು ಗ್ರಾಮದ ಮುಖ್ಯ ರಸ್ತೆಗಳು ಹಾಳಾಗಿದ್ದು ವಾಹನಸ್ವಾರರು ತೀವ್ರ ತೊಂದರೆ ಅನುಭವಿಹಿಸುವಂತಾಗಿದೆ. ತಗ್ಗು ಗುಂಡಿಗಳಿದ್ದರೂ ರಸ್ತೆಯನ್ನು ಹಲವಾರು ವರ್ಷಗಳಿಂದ ದುರಸ್ತಿಗೊಳಿಸುತ್ತಿಲ್ಲ ವಾಹನ ಸವಾರರು ತಗ್ಗು ಗುಂಡಿಗಳಲ್ಲೇ ಕುಂಟುತ್ತಾ ತೆವಳುತ್ತಾ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ
ಸ್ವಲ್ಪ ಯಾಮಾರಿದ್ರೂ ಬೈಕ್ ಸವಾರರಿಗೆ ಭಾರಿ ಅನಾಹುತಗಳಾಗುತ್ತವೆ. ಕಳೆದ ಕಳೆದ 8 ವರ್ಷಗಳಿಂದ ದುರಸ್ಥಿ ಕಾಣದ ರಸ್ತೆಗಳಿಂದಾಗಿ ಗ್ರಾಮಸ್ಥರು ಹೈರಾಣಾಗಿದ್ದಾರೆ.
ಒಂದು ಅಡಿಗೂ ಹೆಚ್ಚು ಮಳೆ ನೀರು ನಿಲ್ಲುವುದರಿಂದ ವಾಹನ ಸವಾರರ ಪರದಾಡುವಂತಾಗಿದೆ.
ರಸ್ತೆ ದುರಸ್ತಿಗೆ ಮನವಿ ಮಾಡಿದ್ರು ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಕಾರಣ ರಸ್ತೆ ಗುಂಡಿಗಳಲ್ಲಿ ಬಿದ್ದು ಎದ್ದು ಹೋಗ್ತಿರೋ ಬೈಕ್ ಸವಾರರು.
ಕೆಸರು ಗದ್ದೆಯಂತಾಗಿರುವ ರಸ್ತೆ ದುರಸ್ತಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹಿಡಿ ಶಾಪ ಹಾಕುತ್ತಿದ್ದು ಆದಷ್ಟು ಬೇಗ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ. ಜಕನೂರ ಗ್ರಾಮದ ಹನುಮಂತ ದುಂಡಪ್ಪ ಅಮರಿ ಇನ್ನ್ಯನ್ಯೂಸ್ನನೊಂದಿಗೆ ಮಾತನಾಡಿ, ಜಮಖಂಡಿ ಗಲಗಲಿ ರಸ್ತೆ ತೀವ್ರವಾಗಿ ಹದಗೆಟ್ಟಿದ್ದರೂ ಶಾಸಕರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರು ಸ್ಪಂದಿಸುತ್ತಿಲ್ಲ,
ರಸ್ತೆಗಳಲ್ಲಿ ಕೆಸರುಗದ್ದೆ ಅಂತಾಗಿ ಸೊಳ್ಳೆಗಳ ಕಾಟ ಸಾಂಕ್ರಾಮಿಕ ರೋಗಗಳ ಕಾಟ ಹೆಚ್ಚಾಗಿದ್ದರೂ ಪಿಡಿಓ ಲಕ್ಷ ವಹಿಸುತ್ತಿಲ್ಲ ಬೇಗನೆ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು