ಹಾವೇರಿ
ವಿವಿಧ ಬೇಡಿಕೆ ಇಡೆರಿಸುವಂತೆ ಪೌರ ಕಾರ್ಮಿಕರ ಪ್ರತಿಭಟನೆ.

ಹಾವೇರಿ :ವಿವಿಧ ಬೇಡಿಕೆ ಇಡೆರಿಸುವಂತೆ ಪೌರ ಕಾರ್ಮಿಕರ ಪ್ರತಿಭಟನೆ.
ಸವಣೂರು ಪಟ್ಟಣದ ಪುರಸಭೆ ಮುಂದೆ ಪ್ರತಿಭಟನೆ,ಬೇಡಿಕೆ ಈಡೇರಿಸದೆ ಹೋದರೆ ಅ ನಿರ್ದಿಷ್ಟ ಅವಧಿ ಧರಣಿ ಮಾಡುವುದಾಗಿ ಎಚ್ಚರಿಕೆ.. ಹಲವು ಪೌರಕಾರ್ಮಿಕರು ಹತ್ತಾರು ವರ್ಷದಿಂದ ಸೇವೆ ಸಲ್ಲಿಸಿದರು ಇನ್ನು ಕಾಯಂ ಮಾಡಿಲ್ಲ, 20 ವರ್ಷದಿಂದ ದುಡಿಯುತ್ತಿರುವ ಪೌರಕಾರ್ಮಿಕರ ಕೆಲಸವನ್ನು ಖಾಯಂಗೊಳಿಸಬೇಕು ಎಂದು ಒತ್ತಾಯ, ಬೇಡಿಕೆ ಈಡೇರಿಸದೆ ಹೋದರೆ ಕುಡಿಯುವ ನೀರಿನ ಸರಬರಾಜು ನಿಲ್ಲಿಸಲಾಗುವುದು.
ಕಸ ವಿಲೇವಾರಿ ಸ್ಥಗೀತ ಗೊಳಿಸಲಾಗುವುದು ಎಂದು ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದರುಇಂದೇ ಬೇಡಿಕೆ ಈಡೇರಿಸಿದ ಹೋದರೆ ಇಂದಿನಿಂದ ಅ ನಿರ್ದಿಷ್ಟ ಅವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು
ಪೌರಕಾರ್ಮಿಕರು ಸರ್ಕಾರದ ವಿರುದ್ಧ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು, ಪ್ರತಿಭಟನೆಯಲ್ಲಿ ಪೌರಕಾರ್ಮಿಕರು ಹಲವರು ಭಾಗಿಯಾಗಿದ್ದರು