
ಬೆಳಗಾವಿ: ಕರ್ನಾಟಕ ಮರಾಠಾ ಸಮಾಜದ ಪ್ರಮುಖ ನಾಯಕರು ಮತ್ತು ವಿಧಾನ ಪರಿಷತ್ ಸದಸ್ಯರಾದ ಎಂ.ಜಿ. ಮುಳೆ ಅವರು ಭೇಟಿಯಾಗಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರೆಯಲ್ಲಿರುವ ಛತ್ರಪತಿ ಶಿವಾಜೀ ಮಹಾರಾಜರ ತಂದೆಯವರಾದ ಶಹಾಜೀ ಮಹಾರಾಜರ ಸಮಾಧಿ ಅಭಿವೃದ್ಧಿಯ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿಯ ಸಾಹಿತಿಗಳು ಮತ್ತು ಇತಿಹಾಸ ಸಂಶೋಧಕರಾದ ಡಾ. ಸರ್ಜೂ ಕಾಟ್ಕರ್ ಉಪಸ್ಥಿತರಿದ್ಧರು. ಅವರು ಬರೆದ ದಿ ಗ್ರೇಟ್ ಮರಾಠಾ ಶಿವಾಜೀ ಪುಸ್ತಕವನ್ನು ಎಂ.ಎಲ್.ಸಿ. ಎಂ.ಜಿ. ಮುಳೆ ಅವರಿಗೆ ಉಡುಗೊರೆಯಾಗಿ ಮಾಜಿ ಮಹಾಪೌರ ಮಾಲೋಜಿರಾವ್ ಅಷ್ಟೇಕರ ಅವರು ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಆನಂದ ಆಪಟೇಕರ, ಜನಸಂಪರ್ಕ ವಿಕಾಸ್ ಕಲಘಟಗಿ, ಸಕಲ ಮರಾಠಾ ಪದಾಧಿಕಾರಿಗಳಾದ ವಿಜಯ ಕದಮ್, ಲಕ್ಷ್ಮಣ ಕಿಲ್ಲೇಕರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು