ಧಾರವಾಡ
ಧಾರವಾಡದ ಕವಿವಿ ಬೋಧಕೇತರ ಸಿಬ್ಬಂದಿಯಿಂದ ಮುಂಬಡ್ತಿಗಾಗಿ ಪ್ರತಿಭಟನೆ…6ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ ಧರಣಿ..

ಧಾರವಾಡ: ಧಾರವಾಡದ ಕವಿವಿ ಬೋಧಕೇತರ ಸಿಬ್ಬಂದಿಯಿಂದ ಮುಂಬಡ್ತಿಗಾಗಿ ನಡೆಯುತ್ತಿರುವ ಪ್ರತಿಭಟನೆಯು 6ನೇ ದಿನಕ್ಕೆ ಕಾಲಿಟ್ಟದೆ.
ಕೇವಲ ಮುಂಬಡ್ತಿ ಮಾತ್ರವಲ್ಲ ಹಲವು ವರ್ಷಗಳಿಂದ ಸಿಬ್ಬಂದಿಗೆ ವೈದ್ಯಕೀಯ ವೆಚ್ಚ ಸಹಿತ ಭರಿಸಿಲ್ಲ. ಪರಿಹಾರ ಭತ್ಯೆ ಮತ್ತು ಹಬ್ಬದ ಮುಂಗಡ ಪಾವತಿ ಸಹ ಮಾಡಿಲ್ಲ ಎಂಬ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೋಧಕೇತರ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಬಡ್ತಿ ಮಾಡಿದ ಆದೇಶ ಪ್ರತಿ ಕೊಟ್ಟ ಮೇಲೆಯೇ ಪ್ರತಿಭಟನೆ ಕೈ ಬಿಡುವುದಾಗಿ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.