
ಬೆಳಗಾವಿ : ಎನ್ ಸಿ ಪಿ ನಾಯಕ ರಾಜೇಂದ್ರ ಹಗವನೆ ಸೊಸೆ ವೈಷ್ಣವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮಾಜಿ ಸಚಿವ ವೀರಕುಮಾರ್ ಪಾಟೀಲ್ ಪುತ್ರ ಪ್ರೀತಂ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ನಿವಾಸಿಯಾಗಿರುವ ಪ್ರೀತಂ ಪಾಟೀಲ್ ನನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಬಂಧಿಸಿದ್ದಾರೆ.
ವೈಷ್ಣವಿ ಹಗವನೆ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮಾವ ರಾಜೇಂದ್ರ ಹಗವನೆ ಹಾಗೂ ಮೈದುನ ಸುಶೀಲ್ ಎಂಬುವವರಿಗೆ ಆಶ್ರಯ ಹಾಗೂ ಆರ್ಥಿಕ ಸಹಾಯ ನೀಡಿದ ಆರೋಪದ ಮೇಲೆ ಪ್ರೀತಂ ಪಾಟೀಲ್ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವೈಷ್ಣವಿ ಕೊಲೆ ಪ್ರಕರಣ ಸಧ್ಯ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದ್ದು, ವರದಕ್ಷಿಣೆ ಆಸೆಗಾಗಿ ಕೇವಲ 23 ವರ್ಷದ ಯುವತಿಯನ್ನು ಕೊಲೆ ಮಾಡಿರುವ ಆರೋಪದ ಮೇಲೆ ಹಗವನೆ ಕುಟುಂಬದವರು ಸಧ್ಯ ಪೊಲೀಸ್ ಅತಿಥಿಯಾಗಿದ್ದಾರೆ.