Uncategorized

ಜ್ಞಾನೇಶ್ವರ ಮಾವುಲಿ ಮಂದಿರವನ್ನು ನೂತನವಾಗಿ ನವೀಕರಿಸಲಾಗಿದ್ದು, ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರವಿಂದ್ ಪಾಟೀಲ್ ಅವರು ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ

ಖಾನಾಪೂರ ತಾಲೂಕಿನ ಹತ್ತರಗುಂಜಿ ಗ್ರಾಮದ ಶ್ರೀ ಜ್ಞಾನೇಶ್ವರ ಮಾವುಲಿ ಮಂದಿರವನ್ನು ನೂತನವಾಗಿ ನವೀಕರಿಸಲಾಗಿದ್ದು, ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರವಿಂದ್ ಪಾಟೀಲ್ ಅವರು ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಖಾನಾಪೂರ ತಾಲೂಕಿನ ಹತ್ತರಗುಂಜಿಯಲ್ಲಿ ನೂತನಿಕರಣಗೊಂಡಿರುವ ಶ್ರೀ ಜ್ಞಾನೇಶ್ವರ ಮಾವುಲಿ ಮಂದಿರಕ್ಕೆ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ಭೇಟಿ ನೀಡಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಂದಿರದ ಭವ್ಯ ನೂತನ ರೂಪವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಮ್ಮ ವತಿಯಿಂದ ದೇವಸ್ಥಾನಕ್ಕೆ ಭಕ್ತಿಯ ಅಲ್ಪ ಕಾಣಿಕೆಯನ್ನು ಸಮರ್ಪಿಸಿದರು.
ಇದೇ ವೇಳೆ ಮಂದಿರದ ಕಮಿಟಿ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸ್ವಲ್ಪ ಸಮಯ ಕಳೆದ ಅರವಿಂದ್ ಪಾಟೀಲ್ ಅವರಿಗೆ, ದೇವಸ್ಥಾನದ ಸಮಿತಿಯ ವತಿಯಿಂದ ಭಕ್ತಿಪೂರ್ವಕವಾಗಿ ಸತ್ಕರಿಸಿ ಗೌರವ ವಂದನೆ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button