
ಧಾರವಾಡದಲ್ಲಿ ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ ನೀಡಿದ ಸಚಿವ ಲಾಡ್… ಉಸ್ತುವಾರಿ ಸಚಿವ ಲಾಡ್, ವಿರೋಧ ಪಕ್ಷದ ಉಪನಾಯಕ ಬೆಲ್ಲದ, ನವಲಗುಂದ ಎಂಎಲ್ಎ ಕೊನರೆಡ್ಡಿ ಭಾಗಿ..
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಒದಗಿಸುವ ಸಂಬಂಧ ಉಚಿತ ಆರೋಗ್ಯ ತಪಾಸಣೆ ಸಂಚಾರಿ ಆರೋಗ್ಯ ವಾಹನಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಮಂಗಳವಾರದಂದು ಚಾಲನೆ ನೀಡಿದರು.
ಕಾರ್ಮಿಕ ಇಲಾಖೆಯಿಂದಲೇ ಈ ವಾಹನಗಳನ್ನು ನೀಡಲಾಗಿದೆ. ಧಾರವಾಡ ಜಿಲ್ಲೆಗೆ ಒಟ್ಟು ಮೂರು ವಾಹನಗಳು ಮಂಜೂರಾಗಿವೆ.
ಈ ವಾಹನಗಳಲ್ಲಿ ಒಟ್ಟು 20 ಬಗೆಯ ಆರೋಗ್ಯ ತಪಾಸಣೆ ನಡೆಯಲಿದೆ.
ಕಾರ್ಮಿಕರು ಇದ್ದಲ್ಲಿಗೇ ಹೋಗಿ ಈ ವಾಹನಗಳು ಆರೋಗ್ಯ ತಪಾಸಣೆ ನಡೆಸಲಿವೆ. ಈ ವಾಹನಗಳಿಗೆ ಸಚಿವ ಲಾಡ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಇನ್ನೂ ಈ ಸಂದರ್ಭದಲ್ಲಿ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ್, ನವಲಗುಂದ ಎಂಎಲ್‌ಎ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಎಸ್‌ಪಿ ಡಾ.ಗೋಪಾಲ ಬ್ಯಾಕೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.