Uncategorized

ರಸ್ತೆ ಬದಿ ತರಕಾರಿ ವ್ಯಾಪಾರಸ್ಥರಿಗೆ ನೂತನ ವ್ಯಾಪಾರ ಮಳಿಗೆ ಸ್ಥಾಪನೆ – ಶಾಸಕ ನಿಖಿಲ್ ಕತ್ತಿ

ಹುಕ್ಕೇರಿ : ರಸ್ತೆ ಬದಿ ತರಕಾರಿ ವ್ಯಾಪಾರಸ್ಥರಿಗೆ ನೂತನ ವ್ಯಾಪಾರ ಮಳಿಗೆ ಸ್ಥಾಪನೆ – ಶಾಸಕ ನಿಖಿಲ್ ಕತ್ತಿ
ಹುಕ್ಕೇರಿ ನಗರದಲ್ಲಿ ರಸ್ತೆ ಬದಿ ತರಕಾರಿ ವ್ಯಾಒಅರಸ್ಥರಿಗೆ ಶೀಘ್ರದಲ್ಲೇ ನೂತನ ವ್ಯಾಪಾರ ಮಳಿಗೆ ಸ್ಥಾಪಿಸಲಾಗುವದು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು. ಹುಕ್ಕೇರಿ ಪುರಸಭೆ ವತಿಯಿಂದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ವ೮ಷೇಶ ಅನುದಾನದ ಅಡಿಯಲ್ಲಿ ಲ್ಯಾಪ ಟಾಪ ವಿತರಣೆ ಮತ್ತು ನಗರೋತ್ಥಾನ ಯೋಜನೆ ಅಡಿಯಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಹಾಗೂ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ಕುಡಿಯುವ ನೀರಿನ ಟ್ಯಾಂಕ ಮತ್ತು ಟ್ರ್ಯಾಕ್ಟರ ವಿತರಣೆ ಕಾರ್ಯಕ್ರಮಗಳನ್ನು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಉದ್ಘಾಟಿಸಿ ಟ್ರ್ಯಾಕ್ಟರ ಚಲಾಯಿಸಿದರು.
ಕಾಯಿಪಲ್ಯ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಕತ್ತಿ ಹುಕ್ಕೇರಿ ನಗರದಲ್ಲಿ ರಸ್ತೆ ಬದಿ ತರಕಾರಿ ವ್ಯಾಪರಸ್ಥರಿಗಾಗಿ 34 ನೂತನ ಮಳಿಗೆ ಸ್ಥಾಪಿಸಲಾಗುವದು ಕಾರಣ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ನಗರ ಸೌಂದರ್ಯಕ್ಕಾಗಿ ಪುರಸಭೆ ಯೊಂದಿಗೆ ಸಹಕರುಸ ಬೇಕು ಎಂದರು ನಂತರ ಪೌರ ಕಾರ್ಮಿಕರಿಗೆ ಸಮವಸ್ತ್ರ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ ಟಾಪ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ಇಮ್ರಾನ್ ಮೋಮಿನ, ಉಪಾದ್ಯಕ್ಷೆ ಜ್ಯೋತಿ ಬಡಿಗೇರ , ಸ್ಥಾಯಿ ಸಮಿತಿ ಅದ್ಯಕ್ಷ ಮಹಾಂತೇಶ ತಳವಾರ, ಸದಸ್ಯರಾದ ಮಹಾವೀರ ನಿಲಜಗಿ, ಎ ಕೆ ಪಾಟೀಲ,ರೇಖಾ ಚಿಕ್ಕೋಡಿ, ಸದಾಶಿವ ಕರೆಪ್ಪಗೋಳ, ರುಕ್ಮಿಣಿ ಹಳಿಜೋಳ, ಸುರೇಖಾ ಗಳತಗಿಮಠ, ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಅಭೀಯಂತರ ರಾಜಶೇಖರ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button