ಡಂಬಲ್ಸ್ ನಿಂದ ಹೊಡೆದು ಪತ್ನಿ ಕೊಂದ ಪತಿರಾಯ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ರೂಮ್ ನಲ್ಲಿ ಮಲಗಿದ್ದ ಹೆಂಡತಿಯನ್ನು ಡಂಬಲ್ಸ್ ನಿಂದ ಹೊಡೆದು ಕೊಲೆಗೈದ ಬಳಿಕ ಮತ್ತೊಂದು ರೂಮ್ ಗೆ ತೆರಳಿ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ತಾಲೂಕಿನಲ್ಲಿ ನಡೆದಿದೆ. ಗಂಡ – ಹೆಂಡತಿಯ ಜಗಳದಲ್ಲಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಮಾರುತಿ ನಗರದಲ್ಲಿ ಮಂಗಳವಾರ (ಮೇ 27) ಘಟನೆ ನಡೆದಿದ್ದು, ಹೆಂಡತಿ ಸುಮಾಳನ್ನು ಕೊಲೆ ಮಾಡಿದ ಗಂಡ ಬಸವಚಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಎಸ್ ಪಿ ವೆಂಕಟೇಶ್ ಪ್ರಸನ್ನ ಹಾಗೂ ಡಿವೈಎಸ್ಪಿ ರವಿ ಭೇಟಿ ನೀಡಿ ಮಾಹಿತಿ ಪಡೆದರು.ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟ: ಸಾಯುವ ಮುನ್ನ ಬಸವಚಾರಿ ಡೆತ್ ನೋಟ್ ಬರೆದಿದ್ದು, ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದು ಬಾರದಲೋಕಕ್ಕೆ ತೆರಳಿದ್ದಾನೆ. ವಿಜಯಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಗಂಡ – ಹೆಂಡತಿ ಸಾವಿನ ಹಿಂದಿನ ಅಸಲಿ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ.