
ಕುಂದಗೋಳ (ಧಾರವಾಡ ಜಿಲ್ಲೆ) ಪ.ಪಂ ಘನತ್ಯಾಜ್ಯ ಕಸ ವಿಲೇವಾರಿ ಘಟಕದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಶಾಸಕ ಎಂ.ಆರ್.ಪಾಟೀಲ ಚಾಲನೆ
ಎನ್. ಜಿ. ಟಿ ಮತ್ತು ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ 159 ಲಕ್ಷ ರೂ. ಅನುದಾನ ಕಾಮಗಾರಿ ಆರಂಭ
ಪ. ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಅನೇಕ ಸದಸ್ಯರು ಮತ್ತು ಸಿಬ್ಬಂದಿ ಸೇರಿದಂತೆ ಪಟ್ಟಣದ ಅನೇಕ ಮುಖಂಡರು ಭಾಗಿ
ಕುಂದಗೋಳ (ಧಾರವಾಡ ಜಿಲ್ಲೆ) : ಎನ್. ಜಿ. ಟಿ ಮತ್ತು ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ 159 ಲಕ್ಷ ರೂ. ಅನುದಾನದಲ್ಲಿ ಪ.ಪಂ ಘನತ್ಯಾಜ್ಯ ಕಸ ವಿಲೇವಾರಿ ಘಟಕದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಶಾಸಕ ಎಂ ಆರ್ ಪಾಟೀಲ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಫೋಕಸ್ ಟಿವಿ ಡಿಜಿಟಲ್ ನೊಂದಿಗೆ ಮಾತನಾಡಿದ ಪಾಟೀಲ ಅವರು ಪಟ್ಟಣ ಸೇರಿದಂತೆ ಗ್ರಾಮಗಳ ಸ್ವಚ್ಛತೆಗಾಗಿ ಶ್ರಮಿಸುವ ಜತೆಗೆ ಇಂದು ಮಲತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಮಲತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಆಗುವುದರಿಂದ ಸ್ವಚ್ಛತೆ, ಆರೋಗ್ಯ, ಸುಂದರ ಮನೆ ಮಾಡುತ್ತದೆ. ಈ ಕಾರ್ಯಕ್ಕೆ ಮುಂದಾಗಿರುವ ಪಟ್ಟಣ ಪಂಚಾಯಿತಿಯ ನಡೆಯಿಂದ ಸಾರ್ವಜನಿಕರಿಗೆ ಅತ್ಯಾನುಕೂಲವಾಗಲಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಪ.ಪಂ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ, ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಹಾಗೂ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಮಲಿಕ್ ಶಿರೂರು ಹಾಗೂ ಸದಸ್ಯರಾದ ಗಣೇಶ ಕೊಕಾಟೆ, ವಾಗೀಶ ಗಂಗಾಯಿ, ಪ್ರದೀಪ್ ಕಲಾಲ, ಪ್ರವೀಣ್ ಬಡ್ನಿ ಮತ್ತು ಹನಮಂತಪ್ಪ ರಣತೂರ, ಬಿಜೆಪಿ ತಾಲೂಕಾಧ್ಯಕ್ಷ ನಾಗನಗೌಡ ಸಾತ್ಮಾರ, ಉಮೇಶ್ ಹೆಬಸೂರ, ಮಹಾಂತೇಶ ಶ್ಯಾಗೋಟಿ, ಬಸವರಾಜ ಕೊಪ್ಪದ, ಬಿ.ಟಿ.ಗಂಗಾಯಿ, ನಾಗರಾಜ್ ದೇಶಪಾಂಡೆ, ವಾಗೀಶ ಮಣಕಟ್ಟಿಮಠ, ಉಮೇಶ್ ಬೀಡನಾಳ, ಸತೀಶ್ ಪಾಟೀಲ, ನಾಗರಾಜ್ ಸುಬರಗಟ್ಟಿ, ಈರಪ್ಪ ನಾಗಣ್ಣವರ ಸೇರಿದಂತೆ ಅನೇಕರಿದ್ದರು.