ಬೆಳಗಾವಿರಾಜ್ಯ

ಬೆಳಗಾವಿಯಲ್ಲಿ ಫೈರ್ ಫ್ರೈಡೆ…!!! ಒಂದೇ ದಿನ 2 ಕಡೆ ಬೆಂಕಿ ಅವಘಡ..!! ಸದಾಶಿವನಗರ ವಿಜಯ್ ಬೇಕರಿಯಲ್ಲಿಯೂ ಬೆಂಕಿ ಅವಘಡ

ಬೆಳಗಾವಿ: ಅಗ್ನಿಶಾಮಕದಳದಿಂದ ಸ್ಪಂದನೆ ಸಿಗದಿದ್ದಕ್ಕೆ ಬೇಕರಿ ಮಾಲೀಕರ ಅಸಮಾಧಾನ
ಬೆಳಗಾವಿಯಲ್ಲಿ ಶುಕ್ರವಾರ ಬೆಳಗಿನ ಜಾವ ಬಹುಶಃ ಅಗ್ನಿದೇವ ವಕ್ರದೃಷ್ಠಿ ಬೀರಿದ್ದಾನೆ. ನಗರದ ಕಾಂದಾ ಮಾರ್ಕೇಟ್’ನಲ್ಲಿ ಬೆಂಕಿ ಅವಘಡಕ್ಕೆ 2 ಅಂಗಡಿಗಳು ಬೆಂಕಿಗಾಹುತಿಯಾದರೇ, ಬೆಳಗಾವಿಯ ಸದಾಶಿವನಗರದಲ್ಲಿರುವ ವಿಜಯ್ ಬೇಕರಿಯಲ್ಲಿಯೂ ಕೂಡ ಅಗ್ನಿ ಅವಘಡ ಸಂಭವಿಸಿದೆ.
ಬೆಳಗಾವಿಯ ಸದಾಶಿವನಗರ ಸೆಕೆಂಡ್ ಕ್ರಾಸ್ ಬಳಿಯಿರುವ ವಿಜಯ್ ಬೇಕರಿಯಲ್ಲಿ ಶಾರ್ಟ್ ಸರ್ಕ್ಯೂಟ್’ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಒಳಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ನೆರೆಯವರು ಬೆಂಕಿ ಹೊತ್ತಿ ಉರಿಯುವುದು ಗಮನಕ್ಕೆ ಬರುತ್ತಿದ್ದಂತೆ ವಿಜಯ್ ಬೇಕರಿ ಮಾಲೀಕರಿಗೆ ಫೋನಾಯಿಸಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ವಿನೋದ್ ಕದಮ್ ಅವರು, ತಕ್ಷಣ ಅಗ್ನಿಶಾಮಕ ದಳವನ್ನು ಸಂರ್ಪಕಿಸಲು ಪ್ರಯತ್ನಿಸಿದ್ದಾರೆ.
ಹಲವಾರು ಬಾರಿ ಕರೆ ಮಾಡಿದರೂ ಸ್ಪಂದನೆ ದೊರೆತಿಲ್ಲ. ಇದರಿಂದಾಗಿ ವಿನೋದ್ ಕದಮ್ ಅವರು ತಮ್ಮ ಸಿಬ್ಬಂದಿಗಳ ಸಹಾಯದಿಂದ ಮತ್ತು ನೆರೆಯವರ ಸಹಾಯದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದ ಬಳಿಕ ಅಗ್ನಿಶಾಮಕ ದಳದಿಂದ ಮರು ಕರೆ ಮಾಡಲಾಗಿದೆ. ಅಷ್ಟೋತ್ತಿಗಾಗಲೇ, ಬೆಂಕಿಯಲ್ಲಿ ಸುಟ್ಟು ವಸ್ತುಗಳನ್ನು ಕರಲಾಗಿವೆ.
ಅಗ್ನಿ ಶಾಮಕ ದಳದ ಈ ನಿರ್ಲಕ್ಷ್ಯತನಕ್ಕೆ ವಿನೋದ್ ಕದಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಅವಘಡದಿಂದಾಗಿ ಸುಮಾರು 72 ರಿಂದ 75 ಲಕ್ಷದ ವರೆಗೆ ಹಾನಿಯಾಗಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಒಂದೇ ದಿನ ಬೆಳಗಿನ ಜಾವ ಕಾಂದಾ ಮಾರ್ಕೆಟ್’ನಲ್ಲಿ ಎರಡು ಅಂಗಡಿಗಳಲ್ಲಿ ಮತ್ತು ಸದಾಶಿವನಗರದ ಬೇಕರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಳಗಾವಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button