ಬಾಗಲಕೋಟೆರಾಜ್ಯ

ಸೇನೆಗೆ ಸೇರಿ ಮೂರು ತಿಂಗಳಲ್ಲೇ ಹೃದಯಾಘಾತದಿಂದ ಯೋಧನ ಸಾವು…

ಬಾಗಲಕೋಟೆ:  ಸೇನೆಗೆ ಸೇರಿ ಮೂರು ತಿಂಗಳಲ್ಲಿ ಬಾಗಲಕೋಟೆ ಮೂಲದ ಯೋಧ ಹೃದಯಾಘಾತದಿಂದ ಸಾವಪ್ಪಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಚಿಂಚಲಕಟ್ಟಿ ಎಲ್‌.ಟಿ ಗ್ರಾಮದ ಯೋಧ ಉಪೇಂದ್ರ ಸೋಮನಾಥ ರಾಠೋಡ (23) ಬುಧವಾರ ಸೇನಾ ತರಬೇತಿ ವೇಳೆ ಹೃದಯಾಘಾತದಿಂದ ಚಂಡೀಗಢದಲ್ಲಿ ಮೃತಪಟ್ಟಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಅಸ್ಸಾಂ ರೈಫಲ್ಸ್‌ನಲ್ಲಿ ಸೇನೆಗೆ ಆಯ್ಕೆಯಾಗಿದ್ದ ಉಪೇಂದ್ರ, ಮೂರು ತಿಂಗಳಿನಿಂದ ಚಂಡೀಗಢದಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದರು. ಇವರ ‘ಪಾರ್ಥಿವ ಶರೀರವನ್ನು ಶುಕ್ರವಾರ ಬೆಳಿಗ್ಗೆ ವಿಮಾನದ ಮೂಲಕ ಬೆಳಗಾವಿಗೆ ತಂದು, ಅಲ್ಲಿಂದ ಸೇನಾ ವಾಹನದಲ್ಲಿ ಕೆರೂರ ಪಟ್ಟಣಕ್ಕೆ ತರಲಾಯಿತು.
ಗ್ರಾಮದಲ್ಲಿ ಯೋಧನ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಲಾಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಕರೂರ ಉಪತಹಶೀಲ್ದಾರ್ ವೀರೇಶ ಬಡಿಗೇರ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button