Uncategorized
ಮಳೆಯ ಅವಾಂತರಕ್ಕೆ ರೈತರು ಬೆಳೆದ ಈರುಳ್ಳಿ ಹಾಗೂ ಬಾಳೆ ನೀರು ಪಾಲು

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಅವಾಂತರಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಹಾಗೂ ಬಾಳೆ ಬೆಳೆ ನೀರು ಪಾಲದ ಘಟನೆ ನಡೆದಿದೆ. ಜಿಲ್ಲೆಯ ಕೊಲ್ಲಾರ ಕೊಲ್ಲಾರ ತಾಲೂಕಿನಲ್ಲಿ ನೂರಾರು ರೈತರು ಬೆಳೆದಂತಹ ಈರುಳ್ಳಿ ಬೆಳೆಯುವ ಸಂಪೂರ್ಣವಾಗಿ ಮಳೆಯ ನೀರಿಗೆ ಆಹುತಿಯಾಗಿದೆ.
ರೈತರು ಬೆಳೆದ ಈರುಳ್ಳಿ ಕಟಾವು ಮಾಡಿ, ಶೇಖರಣೆ ಮಾಡಿದ ಸಂದರ್ಭದಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಸಂಪೂರ್ಣ ಹಾಳಾಗಿದೆ. ಇನ್ನೂ ಮಳೆಯ ಅವಾಂತರಕ್ಕೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಆನಂದ ಬಿಸಿ ಎಂಬ ರೈತನ ಬಾಳೆ ಬೆಳೆಯು ಸಂಪೂರ್ಣವಾಗಿ ನೆಲಕಚ್ಚಿದೆ.
ಸತತವಾಗಿ ಸುರಿದ ಮಳೆಯ ಅವಾಂತರಕ್ಕೆ ಸುಮಾರು 10 ಎಕರೆಗೂ ಅಧಿಕ ಬಾಳೆ ಬೆಳೆಯು ಮಳೆಗೆ ತತ್ತರಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆಯುವ ಹನಿಯಾದ ಹಿನ್ನೆಲೆ, ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.