
ಬಾಗಲಕೋಟೆಯ ಜಿ.ಪಂ. ಅಕೌಂಟೆಂಟ್ ಮನೆ ಮೇಲೆ ದಾಳಿ
ಏಕಕಾಲಕ್ಕೆ ಮೂರು ಮನೆಗಳ ಮೇಲೆ ದಾಳಿ
ಬಾಗಲಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಕೌಂಟೆಂಟ್ ಶ್ರೀಶೈಲ್ ತತ್ರಾಣಿ ಅವರಿಗೆ ಸೇರಿದ ಮೂರು ಮನೆಗಳ ಏಕಕಾಲಕಕ್ಕೆ ದಾಳಿ ನಡೆಸಲಾಗಿದೆ ಹುನಗುಂದ ತಾಲೂಕಿನ ಅಮೀನಗಢದಲ್ಲಿ ಇವರ ಮೂರು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಮನೆಗಳಲ್ಲಿ ದೊರೆತ ದಾಖಲೆ ಪತ್ರಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಅಲ್ಲದೇ, ಕಾರ್ಯಾಲಯದಲ್ಲಿಯೂ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.