ಹುಕ್ಕೇರಿ

ಯುವಕರು ಮೊಬೈಲ್ ಆಟ ಬಿಟ್ಟು ದೇಶಿ ಆಟ ಆಡಬೇಕು – ಪುರಸಭೆ ಅಧ್ಯಕ್ಷ ಇಮ್ರಾನ್

ಹುಕ್ಕೇರಿ : ಯುವಕರು ಮೊಬೈಲ್ ಆಟ ಬಿಟ್ಟು ದೇಶಿ ಆಟ ಆಡಬೇಕು – ಪುರಸಭೆ ಅಧ್ಯಕ್ಷ ಇಮ್ರಾನ್

ಹುಕ್ಕೇರಿ ನಗರದಲ್ಲಿ ಯುಥ್ ಕಾಂಗ್ರೆಸ್ ಕಮೀಟಿಯ ವತಿಯಿಂದ ರಾಹುಲ ಅಣ್ಣಾ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಳು ನಡೆದವು. ಕಳೆದ ಐದು ದಿನಗಳಿಂದ ಜರಗುತ್ತಿರುವ 30 ಯಾರ್ಡ ಸರ್ಕಲ್ ಓಪನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ಕ್ರಿಕೆಟ್ ತಂಡಗಳು ಭಾಗವಹಿಸಿದವು.

ಶುಕ್ರವಾರ ಸಾಯಂಕಾಲ ಜರುಗಿದ ಕೊನೆಯ ಫೈನಲ್ ಆಟದಲ್ಲಿ ಗಜಬರವಾಡಿ ತಂಡ ವಿಜಯ ಸಾಧಿಸಿ ಪುರಸಭೆ ಅದ್ಯಕ್ಷ ಇಮ್ರಾನ್ ಮೋಮಿನ ಕೊಡಮಾಡಿದ 25 ಸಾವಿರ ರೂಪಾಯಿ ಬಹುಮಾನ ಮತ್ತು ಟ್ರೋಫಿ ಪಡೆದುಕೊಂಡರೆ ಘಟಪ್ರಭಾ ನಗರದ ತಂಡ 2 ನೇ ಬಹುಮಾನ ಮೌನೇಶ ಪೊತದಾರ ಕೊಡಮಾಡಿದ 15 ಸಾವಿರ ರೂಪಾಯಿ ನಗದು ಮತ್ತು ಟ್ರೋಫಿ ಪಡೆದುಕೊಂಡಿತು.

ಇದಕ್ಕು ಮುಂಚೆ ರಾಜ್ಯ ಕಾಂಗ್ರೆಸ್ ಯುವ ಘಟಕದ ಪ್ರದಾನ ಕಾರ್ಯದರ್ಶಿ ರಾವುಲ ಜಾರಕಿಹೋಳಿ ಪಂದ್ಯಗಳನ್ನು ವೀಕ್ಷಿಸಿ ಆಟಗಾರರಿಗೆ ಶುಭ ಕೋರಿ ಬಹುಮಾನ ವಿತರಿಸಿದರು. ವೇದಿಕೆ ಮೇಲೆ ಮೌನೇಶ ಪೋತದಾರ, ಇಮ್ರಾನ್ ಮೋಮಿನ, ಶಿವು ಮಾರಿಹಾಳ, ವಿಜಯ ರವದಿ, ಮೆಹಬೂಬ ಮುಲ್ಲಾ, ಕಬೀರ ಮಲ್ಲಿಕ,ಶಾನೂಲ ತಹಸಿಲ್ದಾರ, ಸಮೀದ ಖಾನಜಾದೆ ಉಪಸ್ಥಿತರಿದ್ದರು.

ಇಮ್ರಾನ ಮೊಮಿನ ಮಾತನಾಡಿ ಯುವಕರು ಮೊಬೈಲ್ ಪೋನಗಳಿಗೆ ಅಡಿಟ್ ಆಗದೆ ಕ್ರೀಡೆಗಳಲ್ಲಿ ಭಾಗವಹಿಸಿದರೆ ತಮ್ಮ ಆರೋಗ್ಯದ ಜೋತೆಗೆ ಭಾರತ ದೇಶ ಸದೃಢ ವಾಗಲು ಸಹಕಾರಿಯಾಗುತ್ತದೆ ಎಂದರು

ನಂತರ ತಡ ರಾತ್ರಿವರೆಗೂ ಬಿರುಸುನ ರೋಚಕ ಪಂದ್ಯಾವಳಿಗಳು ಜರುಗಿದವು.
ಮುಖಂಡ ಕಬೀರ ಮಲ್ಲಿಕ ಮಾತನಾಡಿ ದೇಶದ ಒಗ್ಗಟ್ಟಿಗೆ ನಾವೆಲ್ಲರೂ ಒಂದಾಗಿ ಇರಬೇಕಾಗಿದೆ ಕಾರಣ ಇಂತಹ ಪಂದ್ಯಾವಳಿಗಳನ್ನು ಹಮ್ಮಿಕೊಂಡು ಸಾಮರಸ್ಯದಿಂದ ಸೌಹಾರ್ದ ಯುತವಾಗಿ ಮನರಂಜನೆ ಜೊತೆಗೆ ಆರೋಗ್ಯ ಸಹ ಚನ್ನಾಗಿ ಇರುತ್ತದೆ ಎಂದರು

ಈ ಸಂದರ್ಭದಲ್ಲಿ ನಗರ ಯವ ಕಾಂಗ್ರೆಸ್ ಉಪಾದ್ಯಕ್ಷ ಸೋಹೆಬ ಮುಜಾವರ, ಮೋಹಮ್ಮದ ಮುಜಾವರ, ಜಾವೆದ್ ಖಾನಜಾದೆ, ಕೈಫ್ ಖಾನಜಾದೆ, ನದೀಮ ಮುಜಾವರ, ಅಲ್ತಾಫ್ ಬೇಪಾರಿ, ರಿಹಾನ್ ಚಟ್ಟರಗಿ, ಸರ್ಫರಾಜ ಮೊಮಿನದಾದಾ ಮೋದಲಾದವರು ಕ್ರೀಡೆಗಳು ಯಶಸ್ವಿಗೆ ಶ್ರಮಿಸಿದರು.

Related Articles

Leave a Reply

Your email address will not be published. Required fields are marked *

Back to top button