ಬಿಗ್ ರಿಲೀಫ ನಿಡಿದೆ ಸಿಎಂ ಪತ್ನಿ ಹಾಗೂ ಭೈರತಿ ಸುರೇಶ್ ಅವರಿಗೆ ನೀಡಿದ ಇಡಿ ಸಮನ್ಸ್ ಮುಂದುಡಿಕೆ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ನೀಡಿದ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಫೆ.20ಕ್ಕೆ ಮುಂದೂಡಲಾಗಿದ್ದು, ಸದ್ಯಕ್ಕೆ ಸಿಎಂ ಪತ್ನಿ ಸೇರಿ ಸಚಿವ ಬೈರತಿ ಸುರೇಶ ಅವರಿಗೆ ತಾತ್ಕಾಲಿಕ ರಿಲೀಫ ಸಿಕ್ಕಂತಾಗಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ಜಾರಿ ಮಾಡಿದ್ದು, ಸಮನ್ಸ್ ಹಾಗೂ ಇಡಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಸಿಎಂ ಅವರ ಪತ್ನಿ ಹಾಗೂ ಸಚಿವ ಭೈರತಿ ಸುರೇಶ್ ಅವರ ಪರವಾಗಿ ನ್ಯಾಯವಾದಿಗಳು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಿಎಂ ಅವರ ಪತ್ನಿ ಪಾರ್ವತಿ ಅವರ ಪರ ಸಮೃದ್ಧ ಹೆಗಡೆ ವಾದ ಮಂಡಿಸಿದರು. ಸಿಎಂ ಅವರ ಪತ್ನಿ ಹಾಗೂ ಭೈರತಿ ಸುರೇಶ್ ಅವರಿಗೆ ಜಾರಿಯಾಗಿರುವ ಸಮನ್ಸ್ ರದ್ದು ಮಾಡಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಧಾರವಾಡ ಹೈಕೋರ್ಟ್ನಲ್ಲಿ ನಡೆಸಲಾಯಿತು. ಈ ಪ್ರಕರಣದಲ್ಲಿ ಇಡಿ ಬಂದಿದ್ದು ಸರಿಯೋ ಅಥವಾ ತಪ್ಪೋ ಎಂಬ ವಾದ ಮಂಡಿಸಲಾಗಿದೆ.
ಈ ಪ್ರಕರಣದಲ್ಲಿ ಇಡಿ ಬಂದಿದ್ದು ಯಾಕೆ ಸರಿ ಅಲ್ಲ, ಎಂಬುದರ ಕುರಿತು ವಾದ ಮಾಡಲಾಗಿದೆ. ಒಂದ ತನಿಖೆ ನಡೆಯುತ್ತಿರುವಾಗ ಇನ್ನೊಂದು ತನಿಖೆ ನಡೆಯಬಹುದೇ? ಲೋಕಾಯುಕ್ತ ಸ್ವತಂತ್ರ ಸಂಸ್ಥೆ. ಈ ಸಂಸ್ಥೆ ತನಿಖೆ ನಡೆಸುತ್ತಿರುವಾಗ ಇಡಿ ಬರುವುದು ಎಷ್ಟು ಸರಿ?. ಇದಕ್ಕೆ ಕಾನೂನಾತ್ಮಕ ಅವಕಾಶ ಇದೆಯಾ ಎಂಬ ಪ್ರಶ್ನೆ ಇಟ್ಟಿದ್ದೇವೆ. ಈಗಾಗಲೇ 14 ಸೈಟ್ ವಾಪಸ್ ಕೊಟ್ಟಾಗಿದೆ ಎಂದು ಸಿಎಂ ಪತ್ನಿ ಪರ ನ್ಯಾಯವಾದಿಯವರು ತಿಳಿಸಿದರು. ಸದ್ಯ ವಾದ ಪ್ರತಿವಾದ ಆಲಿಸಿರು ನ್ಯಾಯಪೀಠ, ಹೆಚ್ಚುವರಿ ಸಾಲಿಸಿಟರ್ ಜನರಲ್ಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೇಳಿ ಈ ಅರ್ಜಿಯ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿದೆ.