
ಬೆಳಗಾವಿ: ಶ್ರೀ ಬಾಲಾಜಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ವೆಂಕಟೇಶ್ವರ ದೇವಸ್ಥಾನದ ಭೂಮಿ ಪೂಜೆ ಹಾಗೂ ಅಡಿಗಲ್ಲು ಸಾಮರಂಭ ಕಾರ್ಯಕ್ರಮ ಜೂನ್ 6 ರಂದು ನಡೆಯಲಿದೆ ಎಂದು ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಮುಳ್ಳುರು ತಿಳಿಸಿದರು.
ಬೆಳಗಾವಿಯ ರಡ್ಡಿ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಡಿಗಲ್ಲು ಸಮಾರಂಭ ಕಾರ್ಯಕ್ರಮಕ್ಕೆ ಹರಿಹರದ ರಡ್ಡಿ ಗುರುಪೀಠದ ಶ್ರೀ ವೇಮನಾನಂದ ಶ್ರೀಗಳು, ಸಚಿವರಾದ ಎಚ್ ಕೆ ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಜಿಲ್ಲೆಯ ಶಾಸಕರು ಸೇರಿದಂತೆ ಸಾವಿರಾರು ಜನರು ಭಾಗಿಯಾಲಿದ್ದಾರೆ.
ಬೆಳಗಾವಿ ತಾಲೂಕಿನ ಸುವರ್ಣಸೌಧ ಎದುರಿನ ಕೆಕೆ ಕೊಪ್ಪ ಗ್ರಾಮದಲ್ಲಿ 10 ಎಕರೆ ಗ್ರಾಮದಲ್ಲಿ 15 ಕೋಟಿ ವೆಚ್ಚಿದಲ್ಲಿ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಆಗಲಿದೆ. 5 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ಹಾಗೂ 10 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಆಗಲಿದೆ ಎಂದರು.
ಜನರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಪ್ರಶಾಂತವಾದ ರಮಣಿಯ ಸ್ಥಳದಲ್ಲಿ ಈ ಕಾರ್ಯ ನಡೆಯಲಿದೆ. ದೇವಸ್ಥಾನ ಹಾಗೂ ಕ್ಯಲಾಣ ಮಂಟಪ ಕಾರ್ಯಕ್ರಮ ಮುಗಿದ ಬಳಿಕ ಶೈಕ್ಷಣಿಕ ಕೇಂದ್ರಗಳು ಕಟ್ಟಿ ಸಾಮಾಜಿಕ, ಶೈಕ್ಷಣಿಕ, ದಾರ್ಮಿಕ ಮಾಡುವ ಉದ್ದೇಶ ಹೊಂದಿದ್ದೇವೆ. ಇದಲ್ಲದೆ ಈ ಸ್ಥಳವನ್ನು ಪ್ರವಾಸಿ ಸ್ಥಳ ಮಾಡುವ ಗುರಿ ಹೊಂದಿದ್ದೇವೆ ಎಂದರು
ಈ ವೇಳೆ ಶಾಂತಾ ಜಂಗಲ್, ಬಸವನಗೌಡಾ ಕಾಮನಗೌಡರ್, ಲತಾ ಅರಕೇರಿ, ಕಾಂತು ಜಾಲಿಬೇರಿ, ಪ್ರಕಾಶ ಕಕರಡ್ಡಿ, ರಾಜೇಂದ್ರ ಪಾಟೀಲ್, ಪರಮೇಶ್ವರ ಮುಳ್ಳುರ, ಬಿ ಎಚ್ ಪಾಟೀಲ್, ರವೀಂದ್ರ ಹಿರೇದೇಸಾಯಿ, ಪ್ರಕಾಶ ಕಾತರಕಿ ಇದ್ದರು.