ಬೆಳಗಾವಿರಾಜ್ಯ

ಬೆಳಗಾವಿ ಮಹಾನಗರ ಪಾಲಿಕೆಯ ಸಭೆಗೆ ಅಧಿಕಾರಿಗಳು ಗೈರು; ಡಿಎಂಕೆಗೆ ದೂರು ನೀಡಲು ನಗರಸೇವಕರ ಒತ್ತಾಯ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆಗೆ ವರಿಷ್ಠಾಧಿಕಾರಿಗಳು ಗೈರಾದ ಹಿನ್ನೆಲೆ ನಗರಸೇವಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ, ಡಿಎಂಕೆಗೆ ದೂರು ನೀಡಲು ಅಧ್ಯಕ್ಷರನ್ನು ಒತ್ತಾಯಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಅಧ್ಯಕ್ಷೆ ರೇಷ್ಮಾ ಕಾಮಕರ ಅಧ್ಯಕ್ಷತೆಯಲ್ಲಿ ಅರ್ಥ ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆಯನ್ನು ಕರೆಯಲಾಗಿತ್ತು.

ಉಪಮಹಾಪೌರರಾದ ವಾಣಿ ಜೋಷಿ, ಆಡಳಿತ ಪಕ್ಷದ ನಾಯಕ ಹಣುಮಂತ ಕೊಂಗಾಲಿ, ನಗರಸೇವಕರಾದ ಶಂಕರ್ ಪಾಟೀಲ್, ಸಾರೀಕಾ ಪಾಟೀಲ್, ರೇಷ್ಮಾ ಭೈರಕದಾರ್, ರವಿ ಧೋತ್ರೆ ಇನ್ನುಳಿದವರು ಮಹತ್ವದ ವಿಷಯಗಳ ಕುರಿತು ಚರ್ಚೆಯನ್ನು ನಡೆಸಿದರು.

ಆದರೇ, ಸಭೆಗೆ ಉನ್ನತಮಟ್ಟದ ಅಧಿಕಾರಿಗಳು ಉಪಸ್ಥಿತರಿರ ಹಿನ್ನೆಲೆ ನಗರಸೇವಕ ರವಿ ಧೋತ್ರೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ನಗರಸೇವಕರಿಗೆ ಅಧಿಕಾರಿಗಳು ಸಹಯೋಗ ನೀಡುತ್ತಿಲ್ಲ. ಸಭೆಗೆ ಅಧಿಕಾರಿಗಳು ಗೈರಾಗುವುದರಿಂದ ಮಹತ್ವದ ವಿಷಯಗಳ ಚರ್ಚೆ ಸರಿಯಾಗಿ ಆಗುತ್ತಿಲ್ಲ. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಡಿಎಂಕೆ ಗೆ ದೂರು ನೀಡಬೇಕೆಂದು ಅಧ್ಯಕ್ಷರನ್ನು ಒತ್ತಾಯಿಸಿದರು.

ನಂತರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ, ಆರೋಗ್ಯಕರ ವಾತಾವರಣ ನಿರ್ಮಾಣ ಸೇರಿದಂತೆ ಇನ್ನುಳಿದ ಮಹತ್ವದ ವಿಷಯಗಳ ಚರ್ಚೆ ನಡೆಯಿತು.

ಸಭೆಯಲ್ಲಿ ಕಂದಾಯ ಉಪಾಯುಕ್ತರಾದ ರೇಷ್ಮಾ ತಾಳಿಕೋಟಿ, ಉಪಾಯುಕ್ತರಾದ ಉದಯಕುಮಾರ್ ತಳವಾರ, ಪರಿಷತ್ ಕಾರ್ಯದರ್ಶಿಗಳಾದ ಪ್ರಿಯಾಂಕಾ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Related Articles

Leave a Reply

Your email address will not be published. Required fields are marked *

Back to top button