2ನೇ ರಾಷ್ಟ್ರೀಯ ಓಪನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್’ನಲ್ಲಿ ಮಿಂಚಿದ ಬೆಳಗಾವಿ ಸ್ಕೇಟರ್ಗಳು.

ಬೆಳಗಾವಿ :2ನೇ ರಾಷ್ಟ್ರೀಯ ಓಪನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್’ನಲ್ಲಿ ಮಿಂಚಿದ ಬೆಳಗಾವಿ ಸ್ಕೇಟರ್ಗಳು 1 ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ 2 ನೇ ಓಪನ್ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ 2025 ಅನ್ನು ಆಯೋಜಿಸಲಾಗಿತ್ತು. ಈ ಚಾಂಪಿಯನ್ಶಿಪ್ನಲ್ಲಿ ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ನ ಸ್ಕೇಟರ್ಗಳು ಭಾಗವಹಿಸಿದ್ದರು. ಈ ಸ್ಪರ್ಧೆಗಳು ಮೊಹಾಲಿ ಮತ್ತು ಚಂಡೀಗಢದಲ್ಲಿ ನಡೆದವು.
ಈ ಚಾಂಪಿಯನ್ಶಿಪ್ನಲ್ಲಿ 28 ರಾಜ್ಯಗಳಿಂದ 1400ಕ್ಕೂ ಹೆಚ್ಚು ಸ್ಕೇಟರ್ಗಳು ಭಾಗವಹಿಸಿದ್ದರು. ಬೆಳಗಾವಿಯ ಸ್ಕೇಟರ್ಗಳು 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಫ್ರೀ ಸ್ಟೈಲ್ ಸ್ಕೇಟಿಂಗ್ ಹಿರೇನ್ ರಾಜ್ 1 ಬೆಳ್ಳಿ, ಮತ್ತು ದೇವೆನ್ ಬಾಮಣೆ 1 ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಕೆಎಲ್ಇ ಸ್ಕೇಟಿಂಗ್ ರಿಂಕ್ ಮತ್ತು ಗುಡ್ ಶೆಫರ್ಡ್ ಸ್ಕೇಟಿಂಗ್ ರಿಂಕ್ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ನಲ್ಲಿ ಸ್ಕೇಟಿಂಗ್ ತರಬೇತುದಾರರಾದ ಸೂರ್ಯಕಾಂತ್ ಹಿಂಡಲಗೇಕರ, ಮಂಜುನಾಥ ಮಂಡೋಳ್ಕರ್ ಯೋಗೀಶ್ ಕುಲಕರ್ಣಿ, ವಿಶಾಲ ವೇಸನೆ, ವಿಠ್ಠಲ್ ಗಗನೆ ಮತ್ತು ವಿಶ್ವನಾಥ್ ಮಾರ್ಗದರ್ಶನ ದೊರೆತಿದೆ.