ಬೆಳಗಾವಿ

ಹಿರಿಯಾ ನಾಗರೀಕರ ವ್ಹಾಲಿಬಾಲ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ.

ಬೆಳಗಾವಿ: ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಎಚ್ ಡಿ ಕುಮಾರಸ್ವಾಮಿ ಬಡಾವಣೆ ಬೆಳಗಾವಿಯ ಇವರ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ನಡೆದ ವಾಲಿಬಾಲ್ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭ ನಡೆಯಿತು.

ಈ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಂತಹ ಕ್ರೀಡಾಪಟುಗಳಿಗೆ ಈ ಸಂಘದ ವತಿಯಿಂದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹೆಚ್‍.ಡಿ ಕುಮಾರಸ್ವಾಮಿ ಬಡಾವಣೆಯ ಶಿವಾಲಯದಲ್ಲಿ ಏರ್ಪಡಿಸಲಾಗಿತ್ತು. ಈ ಒಂದು ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಸನ್ಮಾನ ವ್ಹಿ ಜಿ ನೀರಲಗಿಮಠ, ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜು ರೊಟ್ಟಿ ಹಾಗೂ ಬಿ ಜಿ ಪಟ್ಟಣಶೆಟ್ಟಿ,ಸಂಘದ ನಿರ್ದೇಶಕರಾದಂತ ಕೃಷ್ಣ ಹಂದಿಗುಂದ ಹಾಗೂ ಜಯಶ್ರೀ ತಳವಾರ , ಹಾಗೂ ಬಡಾವಣೆಯ ಹಿರಿಯ ನಾಗರಿಕರಾದ ದೇವಣ್ಣ ಪ್ರಭು ಇವರು ವಹಿಸಿಕೊಂಡಿದ್ದರು.

ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ವೇದಿಕೆ ಮೇಲಿದ್ದ ಗಣ್ಯರಿಂದ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಾಗೂ ಶೀಲ್ಡ್ ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸಂಘದ ಕಾರ್ಯದರ್ಶಿಯವರಾದ ಸಿ ಬಿ ಸಂಗೊಳ್ಳಿ ಅವರು ನಡೆಸಿದರು ವಂದನಾರ್ಪಣೆಯನ್ನು ಸಂಘದ ನಿರ್ದೇಶಕರಾದ ಎಂ ಎಂ ಬಡಿಗೇರ ಅವರು ನಿರ್ವಹಿಸಿದರು ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಸಂಘದ ನಿರ್ದೇಶಕರಾದ ಎಸ್ ಸಿ ಗಂಗಾಪುರ ಇವರು ಅಚ್ಚುಕಟ್ಟಾಗಿ ನಡೆಸಿದರು.

 

Related Articles

Leave a Reply

Your email address will not be published. Required fields are marked *

Back to top button