ಬೆಳಗಾವಿಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಆಹಾರ ಸಚಿವ, K. H. ಮುನಿಯಪ್ಪ

ಬೆಳಗಾವಿ: ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಈ ಕಾರ್ಯಕ್ರಮಕ್ಕೆ ಆಗಮಿಸಿದ ಆಹಾರ ಸಚಿವರು K. H. ಮುನಿಯಪ್ಪ ಇವರನ್ನು ಬೆಳಗಾವಿ ಆಹಾರ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ನಾಯ್ಕ್ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ಅವಿನಾಶ ಬೆಲ್ಲದ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಮಂಜುನಾಥ ಭೈರವಾಡಗಿ ಮತ್ತು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಬೆಂಗಳೂರು ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಹದೇವಪ್ಪ ಲ ಕಾಮಣ್ಣವರ ಇವರು ಹೂ ಗುಚ್ಛ ನೀಡುವ ಮೂಲಕ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು…
ನಂತರ ಸಚಿವರು ಹಾಗೂ ಎಲ್ಲಾ ಮುಖ್ಯ ಅತಿಥಿಗಳು ನಾಡಗೀತೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು…
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆಹಾರ ಸಚಿವರು K. H. ಮುನಿಯಪ್ಪ ಇವರು “ಗ್ರಾಹಕರು ಯಾವುದೇ ರೀತಿಯಾಗಿ ಮೋಸ ಹೋಗಬಾರದು, ತಮ್ಮ ಕುಂದುಕೊರತೆಗಳನ್ನು ಸರಿ ಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರಬೇಕು ನಾವು ನಿಮ್ಮ ಜೊತೆಗೆ ಸದಾಕಾಲ ಇರುತ್ತೇವೆ ಎಂದು ಹೇಳಿದರು…
ನಂತರ ನ್ಯಾಯವಾದಿ N. R. ಲಾತೂರ ಮಾತನಾಡಿ ಗ್ರಾಹಕರು ಖರೀದಿಸುವ ಸರಕು, ಸಾಮಗ್ರಿಗಳ ತೂಕದಲ್ಲಿ ಯಾವುದೇ ವ್ಯತ್ಯಾಸವಿಲ್ಲದ ಹಾಗೆ ನೋಡಿಕೊಳ್ಳಬೇಕು, ಬಿಲ್ಲನ್ನು ಕಡ್ಡಾಯವಾಗಿ ಪಡೆಯಬೇಕು ಆಗ ಮಾತ್ರ ತಾವು ದಾಖಲಿಸಿದ ದೂರನ್ನು 3 ತಿಂಗಳಗಳಲ್ಲಿ ಖಡ್ಡಾಯವಾಗಿ ಮುಗಿಸಿ ಕೊಡಲಾಗುವುದು ಎಂದು ಹೇಳಿದರು…
ನಂತರ ಮಾನ್ಯ ಆಹಾರ ಸಚಿವರಾದ K. H. ಮುನಿಯಪ್ಪ ಇವರನ್ನು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಬೆಂಗಳೂರು, ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಹದೇವಪ್ಪ ಲ ಕಾಮಣ್ಣವರ ಹಾಗೂ ಜಿಲ್ಲಾ ಕಾರ್ಯಧರ್ಶಿ ಸದಾನಂದ ಅಳಾಜ್, ಜಿಲ್ಲಾ ಕಮಿಟಿ ಸದಸ್ಯರಾದ ಜಗದೀಶ್ ನರಸನ್ನವರ, ಇವರು ಎಲ್ಲಾ ನ್ಯಾಯಬೆಲೆ ಅಂಗಡಿಗಳ ಪರವಾಗಿ ಹೂ ಗುಚ್ಛ ನೀಡುವ ಮೂಲಕ ಸನ್ಮಾನಿಸಿದರು…