
ವಸತಿ ನಿಲಯದಲ್ಲಿ ರಹಸ್ಯ ಸಿಸಿ ಕ್ಯಾಮರಾ ಪಾಲಕರಲ್ಲಿ ಆತಂಕ
ಮಾನ್ವಿ ಪಟ್ಟಣದಲ್ಲಿರುವ ರಾಜಲಬಂಡಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಘಟನೆ ಇದು
ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಸಿಸಿ ಕ್ಯಾಮೆರಾ ಅಳವಡಿಕೆ ಬಯಲು
ಪ್ರಾಂಶುಪಾಲ ಮಹಾಂತೇಶ ನಾಯಕ, ವಾರ್ಡನ್ ಶಂಕ್ರಪ್ಪರ ಕರ್ಮಕಾಂಡ ಕೆಲಸ ಮಾಡುವ ಹಾಸ್ಟೆಲ್ ಇದು.
ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳು ಇಲ್ಲವೇ ಇಲ್ಲ
ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ನೀಡದೆ ವಂಚನೆ ದಂಧೆ ನಡೆಯುತ್ತೆ ಇಲ್ಲಿ
ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೋಣೆ ಹಾಗು ಶೌಚಾಲಯಗಳು ಇರಬೇಕು ಎಂದು ಸರಕಾರದ ನಿಯಮಿದೆ.
ಆದರೇ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರುವ ರಾಜಲಬಂಡಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರ ಶೌಚಾಲಯಗಲ್ಲಿ ರಹಸ್ಯ ಸಿಸಿ ಕ್ಯಾಮೆರಾ ಇಟ್ಟಿರುವುದು ಬೆಳಕಿಗೆ ಬಂದಿದ್ದು ,ಮಾನ್ವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಯುವ ರಾಜಲಬಂಡಾ ಮೊರಾರ್ಜಿ ದೇಸಾಯಿ ವಸತಿಯಲ್ಲಿ ಈ ಘಟನೆ ನಡೆದಿದೆ.
ವಸತಿ ಶಾಲೆಯ ಪ್ರಾಂಶುಪಾಲ ಮಹಾಂತೇಶ, ವಾರ್ಡನ್ ಶಂಕ್ರಪ್ಪರ ದುರಾಡಳಿತದಿಂದ ವಿದ್ಯಾರ್ಥಿಗಳಿಗೆ
ವಿಧ್ಯಾರ್ಥಿನೀಯರ ಜೀವನದ ಜೋತೆ ಚೆಲ್ಲಾಟ ಆಡುತ್ತಿರುವ ಮೇಲ್ನೋಟಕ್ಕೆ ಕಂಡು ಬಂದಿದೆ.
ಇಂತದ ಘಟನೆಗಳು ಮತ್ತೆ ಮತ್ತೆ ಮರು ಕಳಿಸುತ್ತಿದ್ದು ವಸತಿ ಶಾಲೆಯ
ಪ್ರಾಂಶುಪಾಲರು ಮತ್ತು ವಾರ್ಡನ್ ಗಳು ವಿಧ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಪೋಷಕರೆ ಆರೋಪಿಸಿದ್ದಾರೆ.
ರಾಜಲಬಂಡಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕತೆ ಶೌಚಾಲಯ ಕೋಣೆಗಳು ಇಲ್ಲದ ಕಾರಣ ಶೌಚಾಲಯದಲ್ಲಿ ರಹಸ್ಯ ಸಿಸಿ ಕ್ಯಾಮೆರಾ ಯಾರು ಇಟ್ಟಿದ್ದಾರೆಂದು ತಿಳಿಯಬೇಕಾಗಿದೆ.
ಒಟ್ಟಾರೆಯಾಗಿ ನೋಡಿದರೆ ವಿದ್ಯಾರ್ಥಿನಿಯರ ಶೌಚಾಲಯ ಕೋಣೆಗಳಲ್ಲಿ ರಹಸ್ಯ ಸಿಸಿ ಕ್ಯಾಮೆರಾ ಇಟ್ಟಿರುವುದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದು,ಇದಕ್ಕೆ ಏನಾದರು ಅನಾಹುತವಾದರೆ ಪ್ರಾಂಶುಪಾಲ ಮಹಾಂತೇಶ ವಾರ್ಡನ್ ಶಂಕ್ರಪ್ಪ ನೇರ ಹೋಣೆಗಾರರು ಎಂದು ಹೋರಾಟಗಾರರ ಆರೋಪವಾಗಿದೆ.