ಉದ್ಯೋಗ ಖಾತ್ರಿ ಯೋಜನೆ ಅಲ್ಲ ಇದು ಉದ್ಯೋಗ ಕತ್ತರಿ ಯೋಜನೆ.
ಉದ್ಯೋಗ ಖಾತ್ರಿ ಯೋಜನೆ ಅಲ್ಲ ಇದು ಉದ್ಯೋಗ ಕತ್ತರಿ ಯೋಜನೆ.

ಉದ್ಯೋಗ ಖಾತ್ರಿ ಯೋಜನೆ ಅಲ್ಲ ಇದು ಉದ್ಯೋಗ ಕತ್ತರಿ ಯೋಜನೆ.
ಕೇಂದ್ರ ಸರ್ಕಾರದ ಮಹತ್ವದ ಉದ್ಯೋಗ ಖಾತ್ರಿ ಯೋಜನೆ ಬಡ ಕೂಲಿ ಕಾರ್ಮಿಕರು ಬೇರೆ ಊರು ಮತ್ತು ರಾಜ್ಯಗಳಿಗೆ ವಲಸೆ ಹೋಗುವವನು ತಪ್ಪಿಸಿ ತಮ್ಮ ಸ್ವಂತ ಗ್ರಾಮಗಳಲ್ಲಿಯೇ ದುಡಿದು ತಮ್ಮ ಜೀವನವನ್ನು ಸಾಗಿಸಲೆಂದು ಕೇಂದ್ರ ಸರಕಾರ ಉದ್ಯೋಗ ಖಾತ್ರಿ ಯೋಜನೆಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದೆ
ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿಯಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿಲ್ಲ ಕಾರಣ ಉದ್ಯೋಗ ನೀಡಿದರೆ ಉದ್ಯೋಗ ಮಾಡಿದ ಕೂಲಿ ಕಾರ್ಮಿಕನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ ಈ ಕಾರಣದಿಂದಾಗಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ ಕೆಲಸಕ್ಕೆ ಬಾರದವರನ್ನು ಕರೆಸಿ ಯಾವುದೇ ಒಂದು ಸ್ಥಳದಲ್ಲಿ ನಿಲ್ಲಿಸಿ ಜಿಪಿಎಸ್ ಮಾಡುವುದು ಜಿಪಿಎಸ್ ಮಾಡಿದ ಛಾಯಾಚಿತ್ರದಲ್ಲಿ
ಇರುವ ವ್ಯಕ್ತಿಗಳು ಕೆಲಸಕ್ಕೆ ಬಾರದವರು ಅಂದರೆ ಬ್ಯಾಂಕ್ ಖಾತೆಗೆ ಹಣ ಜಮೆ ಆದ ನಂತರ ಪರ್ಸೆಂಟ್ ಲೆಕ್ಕದ ಪ್ರಕಾರ ಪಾಲುದಾರರು ಕೆಲವೊಂದು ಗ್ರಾಮ ಪಂಚಾಯತಿಗಳಲ್ಲಿ ಕೂಲಿ ಕಾರ್ಮಿಕರು ಇಲ್ಲದೆ ಜಿಪಿಎಸ್ ಫೋಟೋ ತೆಗೆದು ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಉದಾಹರಣೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮ ಪಂಚಾಯಿತಿ ದಿನಾಂಕ 21/05/2024 ರಂದು NMMS ಜಿಪಿಎಸ್ ಫೋಟೋ MSR. NO.8586.8587.8588 ಜಿಪಿಎಸ್ ಮಾಡಿದ ಫೋಟೋದಲ್ಲಿ ಕೂಲಿಕಾರ್ಮಿಕರು ಇಲ್ಲ ಹಾಜರಾತಿಯು ಇಲ್ಲ ಆದರೂ ಕೂಡ 11008 ಸಾವಿರ ರೂಪಾಯಿ ಹಣ ಸಂದಾಯವಾಗಿದೆ ಹಾಗಾದರೆ ಕೆಳಗಿನ ಅಧಿಕಾರಿಯನ್ನು ಹಿಡಿದು ಮೇಲಾಧಿಕಾರಿಯರವರೆಗೆ ಸಹಕಾರ ಇರಬೇಕಲ್ಲವೇ.
ಎಷ್ಟೋ ಗ್ರಾಮ ಪಂಚಾಯಿತಿಗಳಲ್ಲಿ ಇಂತಹ ಉದಾಹರಣೆಗಳು ಸುದ್ದಿಯ ಮೂಲಕ ಸಾಕಷ್ಟು ಬೆಳಕಿಗೆ ತಂದರು ಪ್ರಯೋಜನವಾಗುತ್ತಿಲ್ಲ ಕಾರಣ ಇಷ್ಟೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭ್ರಷ್ಟಾಚಾರ ಮಾಡಿ ಸರಕಾರದ ಹಣವನ್ನು ಕೊಳ್ಳೆ ಹೊಡೆದು ಮೇಲಾಧಿಕಾರಿಗೆ ಪಾಲು ನೀಡಿದರೆ ಸಾಕು ಯಾವುದೇ ಸುದ್ದಿ ಪ್ರಕಟವಾಗಲಿ ಅಥವಾ ಮಾಹಿತಿ ಹಕ್ಕು ಅಡಿ ಪ್ರಶ್ನೆ ಮಾಡಲಿ ಯಾವುದಕ್ಕೂ ಲೆಕ್ಕಿಸದೆ ಭ್ರಷ್ಟಾಚಾರ ಎಸಿಗಿದವರ ಮೇಲೆ ಕ್ರಮ ಕೈಗೊಳ್ಳದೆ ಅಂಥವರಿಗೆ ಮುಂಬಡ್ತಿ ಸೇವೆ ನೀಡಿ ಅಲ್ಲಿಯಕ್ಕಿಂತ ಇಲ್ಲಿ ಹೆಚ್ಚಿನ ಭ್ರಷ್ಟಾಚಾರ ಮಾಡಿ ನಮಗೆ ಸಹಕರಿಸುವ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು.
ಇದು ಅಷ್ಟೇ ಅಲ್ಲ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಮಧ್ಯಮ ವರ್ಗಕ್ಕೆ ವರದಾನವಾಗಬೇಕಿದ್ದ ಗ್ರಾಮ ಪಂಚಾಯಿತಿಗಳು ಮರಣ ದಾನ ವಾಗುತ್ತಿವೆ ಹುಕ್ಕೇರಿ ತಾಲೂಕ ಪಂಚಾಯತ AD ಲಕ್ಷ್ಮೀನಾರಾಯಣ್ ಇವರ ಗಮನಕ್ಕೆ ಹಲವಾರು ಇಂತಹ ಭ್ರಷ್ಟಾಚಾರ ಬಗ್ಗೆ ಗಮನಕ್ಕೂ ತಂದರು ಯಾವುದೇ ರೀತಿ ಪ್ರಯೋಜನವಾಗಿಲ್ಲ ಈಗ ನೋಡೋಣ ಏಕೆಂದರೆ ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ (PDO) ಸಾವಿತ್ರಿ ಇವರ ಪತಿ AD ಲಕ್ಷ್ಮೀನಾರಾಯಣ ಇವರು ಈ ಭ್ರಷ್ಟಾಚಾರದ ಬಗ್ಗೆ ಏನು ತನಿಖೆ ನಡೆಸುತ್ತಾರೆ
ನೋಡೋಣ ಈ ಸುದ್ದಿ ಪ್ರಕಟವಾದ ಮೇಲೆ ಭ್ರಷ್ಟಾಚಾರಿಗಳನ್ನು ಶಿಕ್ಷಿಸುತ್ತಾರೆ ಅಥವಾ ರಕ್ಷಿಸುತ್ತಾರಾ ಎಂಬುವುದನ್ನು ಕಾದು ನೋಡೋಣ.