
ಬೆಳಗಾವಿ ತಹಶಿಲ್ದಾರ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಖಡೇಬಜಾರ್ ಪೊಲೀಸರಿಂದ ಚುರುಕುಗೊಂಡ ತನಿಖೆ ಶನಿವಾರ 25 ಜನ ಸರಕಾರಿ ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿದ್ದು ರುದ್ರೇಶ್ ಮೊಬೈಲ್ ಶುಕ್ರವಾರ ಸಿಕ್ಕ ಹಿನ್ನೆಲೆಯಲ್ಲಿ ನಿನ್ನೆ ಒಂದೇ ದಿನ ಆರು ಜನ ಸರ್ಕಾರಿ ನೌಕರರ ವಿಚಾರಣೆ ನಡೆಸಿದ್ದರು. ಜಿಲ್ಲಾಧಿಕಾರಿ ಕಚೇರಿಯ ಹಾಗೂ ತಹಶಿಲ್ದಾರ ಕಚೇರಿಯ ಆರು ಜನ ಸಿಬ್ಬಂದಿ ವಿಚಾರಣೆ ನಡೆಸಿರುವ ಖಡೇಬಜಾರ್ ಪೊಲೀಸರು ಇಂದು ಸಹ ವಿವಾರಣೆ ನಡೆಸಿದ್ದಾರೆ.
ನಿನ್ನೆ ವಿಚಾರಣೆಯ ವೇಳೆ ತಹಶಿಲ್ದಾರ ಬಸವರಾಜ ನಾಗರಾಳ ಕಿರುಕುಳ ಇರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೂ ಇಂದು 25ಜನ ತಹಶಿಲ್ದಾರ ಕಚೇರಿ ಸಿಬ್ಬಂದಿಗೆ ಪೊಲೀಸರು ಬುಲಾವ್ ಮಾಡಿದ್ದು, ತಹಶಿಲ್ದಾರ ಬೆಳಗಾವಿ ಆಫೀಸ್ ಆಲ್ ಸ್ಟಾಪ್ ಗ್ರೂಪ್ ನಲ್ಲಿರುವ ಸಿಬ್ಬಂದಿಯನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಇದೇ ಗ್ರೂಪ್ ನಲ್ಲಿ ಕೊನೆಯದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೆಸೇಜ್ ಮಾಡಿದ್ದ ರುದ್ರೇಶ್ ನವೆಂಬರ್ 4 ಸಂಜೆ 7.31ಕ್ಕೆ ಮೆಸೇಜ್ ಮಾಡಿದ್ದರು. ಈ ವೇಳೆ ಗ್ರೂಪ್ ನಲ್ಲಿ 106ಜನ ಸಿಬ್ಬಂದಿ ಇದ್ದರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ.
ಇದೇ ಕಾರಣಕ್ಕೆ ಪ್ರತಿಯೊಬ್ಬ ಸಿಬ್ಬಂದಿಯನ್ನ ವಿಚಾರಣೆ ಕರೆಯುತ್ತಿರುವ ಪೊಲೀಸರು. ಇಂದು ಒಬ್ಬೊಬ್ಬರಾಗಿ ಕರೆದು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಹಾಕಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನ.12ಕ್ಕೆ ಬರಲಿದೆ. ಮೂರು ಜನ ಆರೋಪಿಗಳಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.