ಸಾಮಾಜಿಕ ಕಾರ್ಯಕರ್ತೆ ಡಾಕ್ಟರ್ ಸೋನಾಲಿ ಸರ್ನೋಬತ್ ಅವರಿಗೆ ಚಾಣಕ್ಯ ರಾಷ್ಟ್ರೀಯ ಪುರಸ್ಕಾರ:B.S.Y.
ಸಾಮಾಜಿಕ ಕಾರ್ಯಕರ್ತೆ ಡಾಕ್ಟರ್ ಸೋನಾಲಿ ಸರ್ನೋಬತ್ ಅವರಿಗೆ ಚಾಣಕ್ಯ ರಾಷ್ಟ್ರೀಯ ಪುರಸ್ಕಾರ:B.S.Y.

ಬೆಳಗಾವಿಯ ಸೂಪ್ರಸಿದ್ಧ ಹೋಮಿಯೋಪತಿ ಸಲಹೆಗಾರರಾದ ಮತ್ತು ಸಾಮಾಜಿಕ ಕಾರ್ಯಕರ್ತೆ ಡಾಕ್ಟರ್ ಸೋನಾಲಿ ಸರ್ನೋಬತ್ ಅವರಿಗೆ ಭಾರತೀಯ ಜನಸಂಪರ್ಕ ಪರಿಷತ್ ಮಂಗಳೂರಿನ ವತಿಯಿಂದ ಚಾಣಕ್ಯ ರಾಷ್ಟ್ರೀಯ ಪುರಸ್ಕಾರ ನೀಡಿ ಸನ್ಮಾನಿಸಲಾಗಿದೆ.
ಮಂಗಳೂರಿನ ಮೋತಿ ಮೆಹಲ್ ಕನ್ವೆನ್ಷನ್ ಹಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಧನ ರಾಜ್ಯ ಸಚಿವ ಶ್ರೀಪಾದ ಏಸೋ ನಾಯಿಕ್, ಮತ್ತು ಅಧ್ಯಕ್ಷ ಏಮೊರಿಟಸ್ ಜೈ ರಾಮ್, ಗೀತಾ ಶಂಕರ್, ತುಷ್ಟಿ ಸುಶ್ರೀ ಸ್ವಿಜಲ್ ಫುರ್ತಡೋ, ಅವರ ಉಪಸ್ಥಿತಿಯಲ್ಲಿ ಈ ಪುರಸ್ಕಾರವನ್ನು ಪ್ರಧಾನ ಮಾಡಲಾಯಿತು. ಡಿಜಿಟಲ್ ವೆಲಬಿಯಿಂಗ್ ಮತ್ತು ಡಿಜಿಟಲ್ ಆರೋಗ್ಯ ಈ ಕುರಿತು ನಡೆದ ಪ್ಯಾನೆಲ್ ಚರ್ಚೆಯಲ್ಲಿ ಸೋನಾಲಿ ಅವರು ಭಾಗವಹಿಸಿದ್ದರು.
ವೈದ್ಯಕೀಯ ಸೇವೆ ಹಾಗೂ ಉದ್ಯಮಶೀಲತೆಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಗಣನೆಗೆ ತೆಗೆದುಕೊಂಡು ಈ ಪುರಸ್ಕಾರ ನೀಡಲಾಗಿದೆ. ಅವರ ಎನ್‌ಜಿಓಗಳಾದ ನಿಯತಿ ಫೌಂಡೇಶನ್, ಮಿಷನ್ ನೋ ಸೊಸೈಡ್, ಹೋಂ ಮಿನಿಸ್ಟರ್ ನಂತಹ ಕಾರ್ಯಕ್ರಮಗಳು ಸಮಾಜವನ್ನ ಸದೃಢಗೊಳಿಸುತ್ತಿವೆ. ಇದೇ ಕಾರ್ಯಕ್ರಮದಲ್ಲಿ ಮರಾಠಿ ಪುಡಾರಿ ದಿನಪತ್ರಿಕೆಯ ಪ್ರತಾಪ್ ಸಿಂಗ್ ಜಾಧವ್ ಮತ್ತು ವಿ ಆರ್ ಎಲ್ ಗ್ರೂಪಿನ ಆನಂದ ಸಂಕೇಶ್ವರ್ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಿದವರನ್ನು ಸತ್ಕರಿಸಲಾಯಿತು.