ಅಬಕಾರಿ ಹಗರಣದಲ್ಲಿ 700 ಅಲ್ಲ, 900 ಕೋಟಿ ರೂ. ಲೂಟಿ: ವಿಪಕ್ಷ ನಾಯಕ ಅಶೋಕ್
ಅಬಕಾರಿ ಹಗರಣದಲ್ಲಿ 700 ಅಲ್ಲ, 900 ಕೋಟಿ ರೂ. ಲೂಟಿ: ವಿಪಕ್ಷ ನಾಯಕ ಅಶೋಕ್

ರಾಮನಗರ: ಪ್ರಧಾನಿ ಮೋದಿ ಅವರು ಹೇಳಿರುವಂತೆ ರಾಜ್ಯ ಸರಕಾರ ಅಬಕಾರಿ ಹಗರಣದಲ್ಲಿ ಲೂಟಿ ಮಾಡಿರುವುದು 700 ಕೋಟಿ ರೂ. ಅಲ್ಲ, 900 ಕೋಟಿ ರೂ. ಹಣವನ್ನು ಮಹಾರಾಷ್ಟ್ರ ಚುನಾವಣೆಗೆ ಬಳಕೆ ಮಾಡಿದರೆ, 200 ಕೋಟಿ ರೂ.ಗಳನ್ನು ರಾಜ್ಯದ ಮೂರು ಉಪಚುನಾವಣೆಗೆ ಬಳಕೆ ಮಾಡುತ್ತಿದ್ದಾರೆ.
ಕರ್ನಾಟಕ ಸರ್ಕಾರ ಚುನಾವಣೆಗಳಿಗೆ ಎಟಿಎಂ ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರಕಾರದ ವಿರುದ್ಧ ಆರೋಪಿಸಿದರು.
ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಮದ್ಯ ಮಾರಾಟಗಾರರಿಂದ ಪ್ರತಿ ವಾರ 18 ಕೋಟಿ ರೂ. ಲಂಚವಾಗಿ ಪಡೆಯಲಾಗುತ್ತಿದೆ. ಬಾರ್‌ಗಳ ಪರವಾನಿಗೆ ನವೀಕರಣಕ್ಕೆ 2 ರಿಂದ 3 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರು ಮಾಹಿತಿ ಪಡೆದಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ. ಆದರೂ, ಸರ್ಕಾರ ಸುಮ್ಮನಿದೆ ಎಂದರೆ ಆರೋಪವನ್ನು ಒಪ್ಪಿಕೊಂಡಂತೆ ಎಂದು ವಾಗ್ಧಾಳಿ ನಡೆಸಿದರು.