Uncategorized
ಪೆಹಲ್ಗಾವ್ ಉಗ್ರರ ದಾಳಿಯಿಂದ ಅಚ್ಚರಿ ರೀತಿಯಲ್ಲಿ ಸೇಫ್
ಪೆಹಲ್ಗಾವ್ ಉಗ್ರರ ದಾಳಿಯಿಂದ ಅಚ್ಚರಿ ರೀತಿಯಲ್ಲಿ ಸೇಫ್

ಪೆಹಲ್ಗಾವ್ ಉಗ್ರರ ದಾಳಿಯಿಂದ ಅಚ್ಚರಿ ರೀತಿಯಲ್ಲಿ ಸೇಫ್
ಬಾಗಲಕೋಟೆಯಿಂದ ಕಾಶ್ಮೀರ ಗೆ ತೆರಳಿದ್ದ ಕಾಸೆಟ್ ಕುಟುಂಬ
ದಾರಿ ಮಧ್ಯ ಗುಡ್ಡ ಕುಸಿತ, ಅರ್ಧಕ್ಕೆ ಮೊಟಕುಗೊಂಡ ಪಹಲಗಾಂ ಪ್ರಯಾಣ
ವೈಷ್ಣೋದೇವಿ ದರ್ಶನದಿಂದಲೇ ಕುಟುಂಬ ಸೇಪ್-ಕಾಸಟ್ ಕುಟುಂಬ
ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಬಾಗಲಕೋಟೆಯ ಕಾಸಟ್ ಕುಟುಂಬ ಫಹಲ್ಗಾವ್ ತೆರಳುವ ಮಾರ್ಗ ಮಧ್ಯೆ ಗುಡ್ಡ ಕುಸಿದ ಕಾರಣ ಪ್ರಯಾಣ ಮೊಟಕುಗೊಳಿಸಿದ್ದರಿಂದ ದಾಳಿಯಿಂದ ಬಚಾವಾಗಿ ಸುರಕ್ಷಿತವಾಗಿದ್ದಾರೆ.
ಬಾಗಲಕೋಟೆಯ ಕಾಸಟ್ ಕುಟುಂಬದ ಆನಂದ್ ಕಾಸಟ್ ಈ ಕುರಿತು ಮಾಹಿತಿ ನೀಡಿದರು.
ಬಾಗಲಕೋಟೆಯ ಮಾರವಾಡಿ ಗಲ್ಲಿಯ ನಿವಾಸಿಗಳಾದ ಕಿಶೋರ್ ಕಾಸಟ್, ಸೂರಜ್ ಕಾಸಟ್, ಗಿರೀಶ್ ಕಾಸಟ್ ಹಾಗೂ ನಿತೀಶ್ ಬಂಗ ನಾಲ್ವರು ದಂಪತಿಗಳು ಐದು ಜನ ಮಕ್ಕಳು ಸೇರಿ ಒಟ್ಟು 13 ಜನರು ಏ.19 ರಂದು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.
ಮೊದಲು ದೆಹಲಿಗೆ ಹೋಗಿ ಬಳಿಕ ವೈಷ್ಣೋದೇವಿ ದರ್ಶನ ಪಡೆದುಕೊಂಡಿದ್ದಾರೆ ಬಳಿಕ ಕಟ್ರಾದಿಂದ ಪಹಲ್ಗಾವ್ಗೆ ಹೋಗುವ ಮುನ್ನ ಮಾರ್ಗ ಮಧ್ಯ ಗುಡ್ಡ ಕುಸಿದಿದೆ. ಇದರಿಂದ 70 ಕಿ. ಮೀ. ಸುತ್ತು ಹಾಕಿ ಪೆಹಲ್ಗಾವ್ಗೆ ಪ್ರವಾಸ ಹೊರಡುವಾಗ ಉಗ್ರರ ದಾಳಿಯ ಮಾಹಿತಿ ತಿಳಿದು ಪ್ರಯಾಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಕಾಸರ ಕುಟುಂಬ ವೈಷ್ಣೋದೇವಿಯೇ ನಮ್ಮನ್ನು ಕಾಪಾಡಿದ್ದಾಳೆಂದು ಭಕ್ತಿಯಿಂದ ನೆನೆದಿದ್ದಾರೆ ಬಾಗಲಕೋಟೆಯತ್ತ ಕುಟುಂಬವು ಮರಳುತ್ತಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.