Uncategorized
ಅರಭಾವಿ ತೋಟಗಾರಿಕೆ ಕಾಲೇಜಿಗೆ ರನ್ನರ್ ಅಪ್ ಪ್ರಶಸ್ತಿ
ಅರಭಾವಿ ತೋಟಗಾರಿಕೆ ಕಾಲೇಜಿಗೆ ರನ್ನರ್ ಅಪ್ ಪ್ರಶಸ್ತಿ

ಮೂಡಲಗಿ: ಬೀದರ್‌ನಲ್ಲಿ ಇತ್ತೀಚೆಗೆ ಜರುಗಿದ 15ನೇ ತೋಟಗಾರಿಕೆ ಮಹಾವಿದ್ಯಾಲಯದ ಯುವಜನೋತ್ಸವ-2024ರಲ್ಲಿ ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯವು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಮಹಾವಿದ್ಯಾಯದ ವಿದ್ಯಾರ್ಥಿಗಳು ಏಕಪಾತ್ರಾಭಿನಯ, ಮೈಮ್, ಸ್ಕಿಟ್, ಕಾರ್ಟೂನ್ ಬಿಡಿಸುವುದು, ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ, ಲಘು ಗಾಯನ, ಸ್ಥಳದಲ್ಲಿ ಚಿತ್ರ ಬಿಡಿಸುವುದು, ತೇಪೆ ಚಿತ್ರಗಾರಿಕೆ ದ್ವಿತೀಯ ಸ್ಥಾನ ಹಾಗೂ ಜಾನಪದ ಹಾಡು, ಏಕಾಂಕ ನಾಟಕ, ಪೋಸ್ಟರ್ ತಯಾರಿಕೆ, ಎಕ್ಸ್ಟೊಂಬರ್ ತೃತೀಯ ಸ್ಥಾನ ಹಾಗೂ ಭಾಷಣ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡು ಕಾಲೇಜಿಗೆ ಹೆಸರು ತಂದಿದ್ದಾರೆ ಎಂದು ತಿಳಿಸಿದ್ದಾರೆ.
ಮಹಾವಿದ್ಯಾಲಯದ ಡೀನ್ ಡಾ.ಎಂ.ಜಿ.ಕೆರುಟಗಿ ಅವರು ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ನೀಡಿದ ದಿಲೀಪಕುಮಾರ ಮಸೂತಿ, ಪ್ರತೀಕ್ಷಾ ಮತ್ತು ರಾಘವೇಂದ್ರ ಕೆ.ಎಸ್ ಅವರನ್ನು ಅಭಿನಂದಿಸಿದ್ದಾರೆ.