ರಾಜಕೀಯರಾಜ್ಯ

ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರಾಜು ಕಾಗೆ

ಬೆಂಗಳೂರು, ನವೆಂಬರ್ 15: ಶಕ್ತಿ ಯೋಜನೆಯ ಪರಿಷ್ಕರಣೆ ಮಾಡಲಾಗುತ್ತದೆ, ನಿಲ್ಲಿಸಲಾಗುತ್ತದೆ ಎಂದು ಚರ್ಚೆ ಜೋರಾಗಿತ್ತು. ಇದರ ಮಧ್ಯೆ ರಾಜ್ಯ ಸರ್ಕಾರಿ ನೌಕರರು, ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ಕುರಿತು ಆಡಳಿತ ಪಕ್ಷ ಕಾಂಗ್ರೆಸ್‌ನ ಶಾಸಕ ರಾಜು ಕಾಗೆ ಅವರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆಗೆ ಬಹಳ ಜನರು ಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಯಾವುದೇ ರೈತಪರ ಯೋಜನೆಗಳು ಜಾರಿಯಾಗಿಲ್ಲ. ಅಧಿಕಾರ ಹಿಡಿಯುವಾಗ ರೈತ ಪರ ಮಾಡುವ ಪಕ್ಷಗಳು, ರಾಜಕಾರಣಗಳು ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಮರೆಯುತ್ತಾರೆ. ಸದ್ಯ ಕಾಂಗ್ರೆಸ್ ಬಂದ ಮೇಲೂ ಹಾಗೆಯೇ ಆಗಿದೆ ಎಂದು ಸ್ವಪಕ್ಷ ಆಡಳಿತದ ವಿರುದ್ಧವೇ ಕಿಡಿ ಕಾರಿದ್ದರು. ಬೇಸರ ಹೊಸ ಹಾರಕಿದ್ದಾರು.

ಶುಕ್ರವಾರ ಹುಬ್ಬಳ್ಳಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಹ ಅವರು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸುವ ಈ ಶಕ್ತಿ ಯೋಜನೆ ಬಹಳ ಪುಣ್ಯದ ಕೆಲಸವಾಗಿದೆ. ಆದರೆ ಈ ಯೋಜನೆಗೆ ಸಾಕಷ್ಟು ಜನರು ಶಾಪವನ್ನು ಹಾಕತ್ತಿದ್ದಾರೆ ಅಂತಲೂ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button