ಧಾರವಾಡ

ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಖಡಕ್ ಸೂಚನೆ

ಲಘಟಗಿ, ನವೆಂಬರ್ 15: ತಾಲೂಕಿನ ವಿವಿಧ ಗ್ರಾಮಗಳಿಗೆ ಸರಿಯಾಗಿ ಬಸ್ ಗಳನ್ನು ಬಿಡದೆ ಹೋದರೆ ಬಸ್ ಡಿಪೋ ಮುಚ್ಚಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿ ಧಾರವಾಡ ಡಿಪೋ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಅವರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು

ಕಲಘಟಗಿಯಲ್ಲಿ ಬಸ್ ಡಿಪೋ ಮಾಡಿದರೂ ಸಮಸ್ಯೆ ನಿವಾರಣೆಯಾಗಿಲ್ಲ. ವಿವಿಧ ಗ್ರಾಮಗಳಿಂದ ದೂರು ಕೇಳಿ ಬರುತ್ತಿವೆ ಡಿಪೋ ಕತ್ತೆ ಕಾಯಲು ಇಟ್ಟುಕೊಂಡಿದ್ದೇವಾ , ಎಂದು ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು.

ಇದಕ್ಕೆ 55 ಸಿಬ್ಬಂದಿ ಗೈರು ಹಾಜರಾಗಿದ್ದಾರೆ ಇದರಿಂದ ಸಮಸ್ಯೆಯಾಗುತ್ತಿದೆ ಅಧಿಕಾರಿಗಳು ಉತ್ತರಿಸಿದರು. ಹುಬ್ಬಳ್ಳಿಯಿಂದ ಸಾಯಂಕಾಲ 7 ಗಂಟೆಯಿಂದ ಕಲಘಟಗಿಗೆ ಯಾವುದೇ ಬಸ್ ಸೌಕರ್ಯವಿಲ್ಲ ಎಂದು ದೂರ ಕೇಳಿ ಬಂದವು.

ತಾಲೂಕಿಗೆ ಈಗ ಹತ್ತು ಹೊಸ ಬಸ್ ಬಂದಿವೆ ಎಂದು ಅಧಿಕಾರಿಗಳು ಹೇಳಿದರು.

ಧಾರವಾಡ ಅಳ್ನಾವರ ಮತ್ತು ಕಲಘಟಗಿ ತಾಲೂಕಿನಲ್ಲಿ ಕೋ ಆಪರೇಟಿವ್ ಸೊಸೈಟಿ ಮತ್ತು ಫಾರ್ಮಿಂಗ್ ಸೊಸೈಟಿ ಜಮೀನುಗಳ ರೈತರಿಗೆ ಪಟ್ಟಾ ನೀಡಲಾಗುವುದು. ಮತ್ತು ಬಗರ್ ಹುಕುಂ 1521 ಅರ್ಜಿ ಪ್ರಕರಣಗಳನ್ನು ಸರ್ವೇ ಮಾಡಿ ಪರಿಶೀಲಿಸಿ ನನ್ನ ಜೊತೆ ಚರ್ಚೆ ಮಾಡದೆ ಯಾವ ಅರ್ಜಿಗಳನ್ನು ರಿಜೆಕ್ಟ್ ಮಾಡಬೇಡಿ ಎಂದು ತಾಲೂಕು ತಹಸಿಲ್ದಾರ್ ವೀರೇಶ್ ಮುಳಗುಂದಮಠ ಖಡಕ್ ಸೂಚನೆ ನೀಡಿದರು.

ಕಲಘಟಗಿ ತಾಲೂಕಿನ ಮಿಶ್ರೀಕೋಟಿ, ಗಂಜಿಗಟ್ಟಿ, ಹಾಗೂ ವಿವಿಧ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಸರಕಾರಿ ಮತ್ತು ಖಾಸಗಿ ಜಾಗದಲ್ಲಿ ಮನೆಯನ್ನ ಕಟ್ಟಿಕೊಂಡು ವಾಸ ಮಾಡುತ್ತಿರುವ ಕುಟುಂಬಗಳಿಗೆ ಉಪ ಗ್ರಾಮ ಮಾಡಲಾಗುವುದು ಎಂದರು.

ಕಲಘಟಗಿ ಪಟ್ಟಣಕ್ಕೇ ಬೆನಚಿಕೆರೆಯಿಂದ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿತು ಈಗ 10 ದಿನಕ್ಕೆ ಒಮ್ಮೆ ಶುದ್ಧ ಕುಡಿಯ ನೀರು ಬರುತ್ತಿದೆ. ಇದರಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ದೂರ ಕೇಳಿ ಬಂದವು, ಸಚಿವರು ಕೂಡಲೇ ಒಂದು ವಾರದಲ್ಲಿ ಹೆಚ್ಚಿನ ಪಂಪ್ ಸೆಟ್ ಮೋಟಾರು ಅಳವಡಿಸಿ ಜನರಿಗೆ 5 ದಿನಕ್ಕೊಮ್ಮೆ ಆದರೂ ಕುಡಿಯಲು ನೀರು ಕೊಡಿ, ಸಾಧ್ಯವಾದರೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಹೇಳಿದರು.

ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕೆಲಸ ನಿಗದಿತ ಸಮಯದೊಳಗೆ ಮುಗಿಸಿ ಎಂದು ಗುತ್ತಿಗೆದಾರನಿಗೆ ತಿಳಿಸಿದರು.

ಕಲಘಟಗಿ ತಾಲೂಕ ಆಸ್ಪತ್ರೆ, ಒಳಗೂ, ಹೊರಗೂ ಸುತ್ತಮುತ್ತಲು ಸ್ವಚ್ಛತೆ ಕಾಪಾಡಿ, ಹೆರಿಗೆಗೆಂದು ಬರುವ ಮಹಿಳೆಯರ ಬಗ್ಗೆ ಹೆಚ್ಸಿನ ನಿಗಾ ವಹಿಸಿ ಪ್ರತಿಯೊಂದು ವರದಿ ನೀಡಿ ತಾಲೂಕು ವೈದ್ಯಾಧಿಕಾರಿ ಎಂ ಬಿ ಕಾರ್ಲವಾಡ ಅವರನ್ನ ಕೇಳಿದಾಗ ಉತ್ತರ ನೀಡಲು ತಡವರಿಸಿದರು.

ತ್ರೈಮಾಸಿಕ ಕೆಡಿಪಿ ಪ್ರಗತಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಜಿಲ್ಲಾ ಸಮಾಜ ಕಲ್ಯಾಣ ಜಂಟಿ ನಿರ್ದೇಶಕಿ ಶುಭಂ ಎಸ್ ಆರ್ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಶುಭಾ ಪಿ, ಮಂಜುನಾಥಗೌಡ ಮುರಳ್ಳಿ, ಶಿವಲಿಂಗಪ್ಪ ಯಲಿವಾಳ, ಇಓ ಪರಶುರಾಮ ಸಾವಂತ, ವಿರೇಶ ಮುಳಗುಂದಮಠ, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button