
ಕಾಗವಾಡ: ತಾಲ್ಲೂಕಿನ ಉಗಾರ ಬುದ್ರಕ್ ಗ್ರಾಮದ ವಿಠ್ಠಲ ಮಂದಿರದ ಸಭಾಭವನದಲ್ಲಿ ಮುಸ್ಲಿಂ ಕುಟುಂಬದ ವಿವಾಹ ಸಮಾರಂಭ ಮಂಗಳವಾರ ನಡೆಯಿತು.
ಮರಾಠಾ ಸಮಾಜಕ್ಕೆ ಸೇರಿದ ಮಂದಿರದಲ್ಲಿ ಅಬ್ಬಾಸ್ ದಫೇದಾರ, ಮಾಸಾಯಿ ದಫೇದಾರ ದಂಪತಿಯ ದ್ವಿತೀಯ ಪುತ್ರ ಸಲ್ಮಾನ್ ಮತ್ತು ಶಿರಿನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ದೀಲಿಪ ಕಾಟಕರ, ಲಕ್ಷ್ಮಣ ಜಾಧವ, ಶೀತಲ ಕುಂಬಾರ, ತಮ್ಮಾ ಜಾಧವ, ಬಾಳು ಕದಮ, ಸಂಭಾಜಿ ಕದಮ, ಗುಲಾಬ ನೇಜಕರ, ಎನ್.ಎಂ. ಕುಂಬಾರ, ಪಿ.ವಿ. ಜೋಶಿ, ಪ್ರಕಾಶ ವಡಗಾಂವೆ, ನೂರಸಾಬ್ ಬಿಜ್ಜರಿ, ಮುನಾಫ್ ಚೌಧರಿ ವಿವಾಹಕ್ಕೆ ಸಾಕ್ಷಿಯಾದರು.