ವೈದ್ಯರ ನಿರ್ಲಕ್ಷ್ಯದಿಂದ ಬೆಳಗಾವಿಯಲ್ಲಿ ಬಾಣಂತಿ ಸಾವು

ವೈದ್ಯರ ನಿರ್ಲಕ್ಷ್ಯದಿಂದ ಬೆಳಗಾವಿಯಲ್ಲಿ ಬಾಣಂತಿ ಸಾವು
ರೊಚ್ಚಿಗೆದ್ದ ಕುಟುಂಬಸ್ಥರಿಂದ ಬೆಳಗಾವಿ ಬೀಮ್ಸ್ ಎದುರಿಗೆ ದಿಢೀರ್ ಪ್ರತಿಭಟನೆ!
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಬಾಣಂತಿ ಕಲ್ಪನಾ ರಾಠೋಡ ಸಾವು
ಮಧ್ಯರಾತ್ರಿ 2.30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗವಿಗೆ ಜನ್ಮ ನೀಡಿದ್ದ ಬಾಣಂತಿ
ಮಗು ಮತ್ತು ತಾಯಿ ಆರೋಗ್ಯವಾಗಿ ಇರುವುದಾಗಿ ವೈದ್ಯರು ಹೇಳಿಕೆ
ಇಂದು ಬೆಳಿಗ್ಗೆ 8.30ರವರೆಗೂ ಆರೋಗ್ಯವಾಗಿದ್ದ ಬಾಣಂತಿ ಕಲ್ಪನಾ ರಾಠೋಡ
ಬಳಿಕ ಬಾಣಂತಿ ಆರೋಗ್ಯದಲ್ಲಿ ಏಕಾಏಕಿ ಏರುಪೇರಿನಿಂದ ಸಾವುನ್ನಪ್ಪಿರುವುದಾಗಿ ವೈದ್ಯರು ಹೇಳಿಕೆ
ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವಾಗಿದೆ
ಬಾಣಂತಿ ಮಹಿಳೆಗೆ ಎರಡೆರಡು ಬಾರಿ ಸಿಜಿರಿಯನ್ ಮಾಡಿರೋ ಆರೋಪ
ಆಪರೇಷನ್ ಸಂದರ್ಭದಲ್ಲಿ ಧರಿಸುವ ವಸ್ತ್ರ ಧರಿಸಿಲ್ಲ, ತರಾತುರಿಯಲ್ಲಿ ಸಿಜಿರಿಯನ್ ಮಾಡಿದ್ದಾರೆ ಎಂದ ಕುಟುಂಬಸ್ಥರು
ಬಾಣಂತಿ ಮಹಿಳೆಗೆ ಆರೋಗ್ಯದಲ್ಲಿ ಏರುಪೇರಾದಗ ಬೇರೆಡೆ ಆಸ್ಪತ್ರೆಗೆ ರೋಗಿ ಡಿಸ್ಚಾರ್ಜ್ ಮಾಡುವಂತೆ ಕುಟುಂಬಸ್ಥರ ಮನವಿ
ಕುಟುಂಬಸ್ಥರು ಮನವಿ ಮಾಡಿದ್ರೂ ಬಾಣಂತಿ ಮಹಿಳೆ ಬೇರೆ ಆಸ್ಪತ್ರೆಗೆ ಕಳುಹಿಸದೇ ನಿರ್ಲಕ್ಷ್ಯ ಆರೋಪ
ನಿರ್ಲಕ್ಷ್ಯ ತೋರಿದ ವೈದ್ಯರನ್ನು ಈ ಕೂಡಲೇ ವಜಾ ಮಾಡುವಂತೆ ಕುಟುಂಬಸ್ಥರ ಪಟ್ಟು