ಕೊಲೆ ನಡೆದ ಸ್ಥಳದಲ್ಲಿ ಆರೋಪಿ ದರ್ಶನ್ ಇದ್ದ Photo ಪೊಲೀಸರ ಕೈಗೆ.!

ಕೊಲೆ ನಡೆದ ಸ್ಥಳದಲ್ಲಿ ಆರೋಪಿ ದರ್ಶನ್ ಇದ್ದ Photo ಪೊಲೀಸರ ಕೈಗೆ.!
ಬೆಂಗಳೂರು : ನಟ ದರ್ಶನ್ಗೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (murder case) ದೊಡ್ಡ ಸಂಕಷ್ಟವೇ ಎದುರಾಗಿದೆ. ಪೊಲೀಸರು ಕೊಲೆ ಕೇಸ್ಗೆ ಸಂಬಂಧಿಸಿದಂತೆ ಕೋರ್ಟ್ಗೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.
ಚಾರ್ಜ್ಶೀಟ್ನಲ್ಲಿ ಮತ್ತೆರಡು ಫೋಟೋ ಸಾಕ್ಷಿಗಳನ್ನು ಪೊಲೀಸರು ಸೇರಿಸಿದ್ದಾರೆ ಎನ್ನಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ (eyewitnesses) ಮೊಬೈಲ್ನಿಂದ 2 ಫೋಟೋಗಳನ್ನು ರಿಕವರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಸದ್ಯ ಕೊಲೆ ನಡೆದ ಸ್ಥಳದಲ್ಲಿ ತೆಗೆದ ಫೋಟೋ ರಿಕವರಿ ಮಾಡಲಾಗಿದ್ದು, ಸ್ಥಳದಲ್ಲಿ ದರ್ಶನ್ ನಿಂತಿರುವ ಫೋಟೋ ಕೂಡ ಸಿಕ್ಕಿದೆ ಎನ್ನಲಾಗಿದೆ.
ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ನಿಂತಿರುವ ಫೋಟೋವನ್ನು ಇದೀಗ retrive ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎಂಬುದಕ್ಕೆ ಈ 2 ಫೋಟೋಗಳು ಸಾಕ್ಷಿಯಾಗಲಿವೆ (witness).
ಇಂದು ದರ್ಶನ್ ಬೇಲ್ ಅರ್ಜಿ ವಿಚಾರಣೆ (Application hearing) ನಡೆಯಲಿದೆ. ಇದೀಗ ಫೋಟೋ ಹೊರಬಿದ್ದಿದ್ದು, ಈ ಫೋಟೋಗಳು ದರ್ಶನ್ಗೆ ದೊಡ್ಡ ಸಂಕಷ್ಟ ತಂದೊಡ್ಡಲಿವೆ.