ರಾಜಕೀಯರಾಜ್ಯ

ನವೆಂಬರ್ 26ರಂದು ಭಾರತೀಯ ನಾಗರೀಕರಿಗೆ ವಿಶೇಷ ದಿನವಾದ ಹಿನ್ನೆಲೆಯಲ್ಲಿ, ಮಾನ್ವಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಲೋಯೋಲಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಸಂವಿಧಾನ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಯಲ್ಲಪ್ಪ ಬಾದರದಿನ್ನಿ ತಿಳಿಸಿದರು.

ನವೆಂಬರ್ 26ರಂದು ಭಾರತೀಯ ನಾಗರೀಕರಿಗೆ ವಿಶೇಷ ದಿನವಾದ ಹಿನ್ನೆಲೆಯಲ್ಲಿ, ಮಾನ್ವಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಲೋಯೋಲಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಸಂವಿಧಾನ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಯಲ್ಲಪ್ಪ ಬಾದರದಿನ್ನಿ ತಿಳಿಸಿದರು.

ನವೆಂಬರ್ 26ರಂದು ಭಾರತೀಯ ನಾಗರೀಕರಿಗೆ ವಿಶೇಷ ದಿನವಾದ ಹಿನ್ನೆಲೆಯಲ್ಲಿ, ಮಾನ್ವಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಲೋಯೋಲಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಸಂವಿಧಾನ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಎಂದು ವಕೀಲ ಯಲ್ಲಪ್ಪ ಬಾದರದಿನ್ನಿ ತಿಳಿಸಿದರು.

ಇಂದು ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದೆ ನಮ್ಮ ಗುರಿ ಎಂದರು.

ಅಂದು ನಡೆಯುವ

ಕಾರ್ಯಕ್ರಮದಲ್ಲಿ ಬಹುಜನ ಚಿಂತಕ ದಾವಣಗೆರೆ ವಿಜಯಬಾಬು ಪಾಟೇಲ್ ಸೇರಿದಂತೆ ರಾಜಕೀಯ ಗಣ್ಯರು ಹಾಗು ಶಾಲಾ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ನಮ್ಮ ಸಂಸತ್ತಿನಲ್ಲಿ ಅಂಗೀಕರಿಸಿದ ದಿನವಾದ ಹಿನ್ನೆಲೆಯಲ್ಲಿ ನಾವೆಲ್ಲರೂ ವಿಶೇಷವಾಗಿ ಸಂವಿಧಾನ ಸಮರ್ಪಣಾ ದಿನವನ್ನು ಸಂಭ್ರಮದಿಂದ ಆಚರಿಸೋಣ ಎಂದರು.

ಈ ಸಂದರ್ಭದಲ್ಲಿ ದಲಿತ ಪ್ರಗತಿಪರ ಒಕ್ಕೂಟದ ಮುಖಂಡರಾದ ರವೀಂದ್ರ ಜಾನೆಕಲ್ ,ತಿಪ್ಪಣ್ಣ ಬಾಗಲವಾಡ ,ಪಿ.ರವಿಕುಮಾರ್ ,

ಪ್ರಭುರಾಜ್ ಕೊಡ್ಲಿ, ಬಸವರಾಜ ನಕ್ಕುಂದಿ ,ಚಂದ್ರಶೇಖರ್ ನಾಯಕ ,ಮಾರೆಪ್ಪಅರವಿ,
ಸೇರಿದಂತೆ ಮುಖಂಡರು ಇದ್ದರು.

Related Articles

Leave a Reply

Your email address will not be published. Required fields are marked *

Back to top button