
24ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನ
ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ- ವಿಶ್ವಜೀತ್ ಹಸಬೆ
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಒಡನಾಟ ಚೆನ್ನಾಗಿದ್ದರೆ ಮಾತ್ರ ಜ್ಞಾನದ ವರ್ಧನೆ ಸಾಧ್ಯ. ಇಂದಿನ ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ ಎಂದು ವಿಶ್ವಜೀತ ಹಸಬೆ ಹೇಳಿದರು.
ಗುರುವರ್ಯ ವಿ.ಗೋ. ಸಾಠೇ ಮರಾಠಿ ಪ್ರಭೋದಿನಿಯ ವತಿಯಿಂದ ಆಯೋಜಿಸಿದ್ದ 24ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮ್ಮೇಳನವನ್ನ ಆರ್. ಎನ್. ಹರಗುಡೆ ಅವರು ಉದ್ಘಾಟಿಸಿದರು. ವೇದಿಕೆಯ ಮೇಲೆ ಪ್ರಬೋದಿನಿಯ ಅಧ್ಯಕ್ಷ ಜಯಂತ್ ನಾರ್ವೇಕರ್, ಸುಭಾಷ್ ಒವುಳಕರ್, ಪ್ರಸಾದ್ ಮೊಳೆರಾಖಿ, ಸ್ವರಾಲಿ ಬಿರ್ಜೆ, ಉಪಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಇನ್ನುಳಿದವರು ಆಸಿನರಾಗಿದ್ದರು.