ಬೆಳಗಾವಿ
ಬೆಳಗಾವಿ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಫೋಟೋಗ್ರಾಫರ್ ಸೋಮಾನಂದ ಗಡಕರಿ ಅವರಿಗೆ ಸುವರ್ಣ ಪದಕ ನೀಡಿ ಗೌರವಿಸಲಾಗಿದೆ.

ಬೆಳಗಾವಿ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಫೋಟೋಗ್ರಾಫರ್ ಸೋಮಾನಂದ ಗಡಕರಿ ಅವರಿಗೆ ಸುವರ್ಣ ಪದಕ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಸಮಾವೇಶದಲ್ಲಿ ವರಿಷ್ಟ ಅಧಿಕಾರಿಗಳು ಪೊಲೀಸ್ ಫೋಟೋಗ್ರಾಫರ್ ಸೋಮಾನಂದ ಗಡಕರಿ ಅವರಿಗೆ ಸುವರ್ಣ ಪದಕ ನೀಡಿ ಗೌರವಿಸಿದ್ದಾರೆ. ಸೋಮಾನಂದ ಗಡಕರಿ ಅವರು ನಗರ ಸಶಸ್ತ್ರ ಮೀಸಲು ಪಡೆಯ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಣಕ ವಿಭಾಗದ ರಾಜ್ಯ ಪೊಲೀಸ್ ಮಹಾನಿರೀಕ್ಷಕ ಡಾ. ಪ್ರಣವ್ ಮಹಂತಿ ಅವರು ಪ್ರಮಾಣಪತ್ರ ನೀಡಿದ್ದಾರೆ.