ಡಿನ್ನರ್ ಸಭೆ ರದ್ಧಾಗಿಲ್ಲ- ಮೂಂದೂಡಲಾಗಿದೆ-ಸಚಿವ ಸತೀಶ ಜಾರಕಿಹೊಳಿ

ನಮ್ಮ ಊಟ ನಮ್ಮ ಜನ. ನಮ್ಮ ಡಿನ್ನರ್ ಪಾರ್ಟಿಯಿಂದ ಬೇರೆಯವರು ಆತಂಕ ಪಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿಗರ ಡಿನ್ನರ್ ಪಾಲಿಟಿಕ್ಸ್ ಆರೋಪಗಳಿಗೆ ಸಚಿವ ಸತೀಶ ಜಾರಕಿಹೊಳಿ ಅವರು ತಿರುಗೇಟು ನೀಡಿದ್ದಾರೆ.
ಇಂದು ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು ,ನಮ್ಮ ಡಿನ್ನರ್ ಪಾರ್ಟಿಯಿಂದ ಬೇರೆಯವರಿಗೆ ಯಾಕೆ ಆತಂಕವಾಗುತ್ತಿದೆ ಗೊತ್ತಿಲ್ಲ. ನಮ್ಮ ಜನ ನಮ್ಮ ಊಟ ಬೇರೆಯವರಿಗೆ ಆತಂಕಗೊಳ್ಳುವ ಪ್ರಶ್ನೆಯೇ ಇಲ್ಲ. ಇನ್ನು ಗೃಹ ಸಚಿವರು ಮತ್ತು ಅಧ್ಯಕ್ಷರು ರಾಜ್ಯ ಉಸ್ತುವಾರಿಗಳನ್ನು ಮನವರಿಕೆ ಮಾಡಿ ಎಸ್.ಸಿ. ಎಸ್.ಟಿ. ಸಮುದಾಯದ ಕುರಿತು ಚರ್ಚಿಸಲು ಡಿನ್ನರ್ ಸಭೆ ಯಾವಾಗ ಬೇಕಾದರೂ ಮಾಡಬಹುದು. ಈಗ ಮೂಂದೂಡಿಕೆಯಾಗಿದೆಯಷ್ಟೇ. ಅನುಮತಿ ಪಡೆದು ಮಾಡುವುದು ಒಳ್ಳೆಯದು ಎಂದರು.
ಸಭೆಯನ್ನು ಮೂಂದೂಡಿದ ತಕ್ಷಣ ಅಹಿಂದ ಸಂಘಟನೆಗೆ ಅಡ್ಡಗಾಲು ಹಾಕಿದ್ದಾರೆ ಎಂದು ಅರ್ಥವಲ್ಲ. ಡಿನ್ನರಗೆ ಅನುಮತಿ ಪಡೆಯಬೇಕು ಎಂದು ಹೇಳಿಲ್ಲ. ಸಭೆಗಾಗಿ ಅನುಮತಿ ಪಡೆಯಬೇಕು ಎಂದಿದ್ದಾರೆ. ಅನುಮತಿ ಪಡೆದು ಮಾಡುವುದು ಒಳ್ಳೆಯದು ಎಂದು ಸಲಹೆಯನ್ನು ನೀಡಿದರು.