Uncategorized

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮುಂದುವರೆದ ಅಭಿವೃದ್ಧಿ ಪರ್ವ

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮುಂದುವರೆದ ಅಭಿವೃದ್ಧಿ ಪರ್ವ

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮುಂದುವರೆದ ಅಭಿವೃದ್ಧಿ ಪರ್ವ

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನದಡಿ ಶಾಸಕ ಆಸೀಫ್ ಸೇಠ್ ಅವರು ಚಾಲನೆಯನ್ನು ನೀಡಿದರು.

ಹಲವಾರು ದಿನಗಳಿಂದ ಹದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು ಹಾಗೂ ಸ್ಥಳೀಯರು ಪರಿತಪಿಸುತ್ತಿದ್ದರು. ಇದನ್ನ ನಗರಸೇವಕರು ಶಾಸಕರ ಗಮನಕ್ಕೆ ತರುತ್ತಿದ್ದಂತೆ ಸಚಿವ ಸತೀಶ್ ಜಾರಕಿಹೊಳಿ ಅವರ ವಿಶೇಷ 25 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಆಸಿಫ್ ಸೇಠ್ ಅವರು ಚಾಲನೆಯನ್ನ ನೀಡಿದರು. ಈ ಕುರಿತು ಇನ್ ನ್ಯೂಸ್ ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. Byte
ಈ ವೇಳೆ ನಗರ ಸೇವಕಿ ಕಡೋಲಕರ್ ಸೇರಿದಂತೆ ಸ್ಥಳೀಯರು ಹಾಗೂ ಇನ್ನುಳಿದವರು ಭಾಗಿಯಾಗಿದ್ದರು.

ಅದರಂತೆ ಬೆಳಗಾವಿಯ ಕಪಿಲೇಶ್ವರ ರಸ್ತೆಯಲ್ಲಿಯೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಶೇಷ ಅನುದಾನದಡಿ ಶಾಸಕ ಆಸೀಫ್ ಸೇಠ್ ಅವರು ಚಾಲನೆಯನ್ನು ನೀಡಿದರು. ಈ ವೇಳೆ ಮಾತನಾಡಿದರು ಹಲವಾರು ದಿನಗಳಿಂದ ಇಲ್ಲಿನ ನಾಗರಿಕರು ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ನಗರ ಸೇವಕರಲ್ಲಿ ಮನವಿಯನ್ನ ಮಾಡಿದ್ದರು. ಈ ಹಿನ್ನಲೆ ಇಂದಿನಿಂದ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದರು. ಇಲ್ಲಿರುವ ಎಲ್ಲ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ತಿಳಿಸಿದರು.

ಈ ವೇಳೆ ನಗರಸೇವಕಿ ವೈಶಾಲಿ ಭಾತಕಾಂಡೆ, ಹಿರಿಯರು ಹಾಗೂ ಸ್ಥಳೀಯರು ಭಾಗಿಯಾಗಿದ್ದರು.

ಇನ್ನು ಬೆಳಗಾವಿಯ ವೀರಭದ್ರೇಶ್ವರ ನಗರದ ಏಳನೇ ಅಡ್ಡರಸ್ತೆಯಲ್ಲಿ ಅಂತರ್ಗತ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನ ವಿಶೇಷ ಅನುದಾನದಲ್ಲಿ ಕೈಗೊಳ್ಳಲಾಗಿದೆ. ಇಂದು ಶಾಸಕ ಆಸೀಫ್ ಸೇಠ್ ಅವರ ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ಶಾಸಕರು ವಿಶೇಷ ಅನುದಾನದಲ್ಲಿ ಕಾಮಗಾರಿಯನ್ನ ಕೈಗೊಳ್ಳಲಾಗಿದ್ದು, ಉತ್ತರ ಮತಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವನ್ನು ಆರಂಭಿಸಲಾಗಿದೆ ಎಂದರು.
ಈ ವೇಳೆ ನಗರ ಸೇವಕ ಬಾಬಾಜಾನ್ ಮತವಾಲೆ ಸೇರಿದಂತೆ ಸ್ಥಳೀಯರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button