
ಮಾನ್ವಿ ಸಿಸಿ ರಸ್ತೆ ಕಾಮಗಾರಿ ನೆಪದಲ್ಲಿ 50 ಲಕ್ಷ ಲೂಟಿ
ತಾಲೂಕಿನ ಕರಡಿಗುಡ್ಡ ಸಿ ಸಿ ರಸ್ತೆ ಕೆಕೆಆರ್ ಡಿಬಿ ಯೋಜನೆ ಅನುದಾನ
ಮಾನ್ವಿ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಶಾಮೀಲು
ರೈತ ಸಂಘದ ಮುಖಂಡ ಹೊಳೆಪ್ಪರಿಂದ ಗಂಭೀರ ಆರೋಪ
ಗುತ್ತಿಗೆದಾರ ಮೋಹನರಿಂದ ಕಳಪೆ ಕಾಮಗಾರಿ ಎಂದು ಆರೋಪ
ಶಾಸಕ ಜಿ. ಹಂಪಯ್ಯ ನಾಯಕ
ಕಳಪೆ ಕೆಲಸದ ಬಗ್ಗೆ ಏನ್ಅಂತಿರಾ?
ಮಾನವಿ ಸುದ್ದಿ
ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ಕಾಮಗಾರಿ ಕಳಪೆ ಮಾಡಿಲಾಗುತ್ತಿದೆ ಎಂದು ಮುಖಂಡರು ಖಂಡಿಸಿದ್ದಾರೆ.
2023-24 ನೆ ಸಾಲಿನ ಕೆಕೆಆರ್ ಡಿಬಿ ಯೋಜನೆಯ 50 ಲಕ್ಷ ಸಿಸಿ ರಸ್ತೆ ಕಾಮುಗಾರಿಯನ್ನು ಲೋಕೋಪಯೋಗಿ ಇಲಾಖೆ ಅಭಿಯಂತರರು ಹಾಗು ಗುತ್ತಿಗೆದಾರ ಮೋಹನ ಸೇರಿಕೊಂಡು ಕಳಪೆ ಮಟ್ಟದ ಕಾಮಗಾರಿ ಮಾಡಿ ಹಣ ಲೂಟಿ ಹೊಡಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕರಡಿಗುಡ್ಡ ಗ್ರಾಮದ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಶಾಸಕ ಹಂಪಯ್ಯ ನಾಯಕರು ಅನುದಾನ 50 ಅನುದಾನ ಬಿಡುಗಡೆ ಮಾಡಿಸಿದ್ದು ಆದರೆ ಮಾನ್ವಿ ಲೋಕೋಪಯೋಗಿ ಅಭಿಯಂತರ ಮಕ್ಸೂದ್, ಎಇಇ ಸಾಮುವೇಲಪ್ಪ ಗುತ್ತಿಗೆದಾರ ಮೋಹನ ಸೇರಿಕೊಂಡು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ
ಎಂದು ರೈತ ಸಂಘದ ಹೊಳೆಯಪ್ಪ ಉಟಕನೂರು ಆರೋಪಿಸಿದ್ದಾರೆ.
ಮಾನ್ವಿ ಲೋಕೋಪಯೋಗಿಜನನ ನ ಅಭಿಯಂತರರು ಹಾಗು ಗುತ್ತಿಗೆದಾರ ಮೋಹನ ಅವರು ಮಾಡಿದ ಸಿಸಿ ರಸ್ತೆ ಕಾಮಗಾರಿಯನ್ನು ಉನ್ನತ ಮಟ್ಟದ ಅಧಿಕಾರಿಗಳು ಸಮಗ್ರವಾಗಿ ತನಿಖೆ ಮಾಡಿ ಗುತ್ತಿಗೆದಾರ ಮೋಹನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.