ರಾಜಕೀಯರಾಜ್ಯ

ಖಾನಾಪೂರ ತಹಶೀಲ್ದಾರ್ ಸರಕಾರದ ನಿಯಮವನ್ನು ಗಾಳಿಗೆ ತೂರಿ ಗ್ರಾಮದ ಜಮೀನಿನ ಅವ್ಯವಹಾರ? ಭೀಮಪ್ಪ ಗಡಾಡ ಆರೋಪ

ಭೀಮಪ್ಪ ಗಡಾಡ ಆರೋಪದಲ್ಲಿ ಯಾವುದೇ ಹುರುಳಿಲ್ಲ:- ಖಾನಾಪೂರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಸ್ಪಷ್ಟಣೆ

ಭೀಮಪ್ಪ ಗಡಾಡ ಆರೋಪದಲ್ಲಿ ಯಾವುದೇ ಹುರುಳಿಲ್ಲ

ಖಾನಾಪೂರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಸ್ಪಷ್ಟಣೆ

ಸರಕಾರದ ನಿಯಮವನ್ನು ಗಾಳಿಗೆ ತೂರಿ ಗ್ರಾಮದ ಜಮೀನಿನ ಅವ್ಯವಹಾರ ಮಾಡಲಾಗಿದೆ ಎಂಬ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಖಾನಾಪೂರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಸ್ಪಷ್ಟಪಡಿಸಿದ್ದಾರೆ.

.ಖಾನಾಪೂರ ತಾಲೂಕಿನ ಜಾಂಬೋಟಿಯ ಹುಳಂದ ಗ್ರಾಮಸ್ಥರಿಗೆ ಸೇರಿದ ರಿ.ಸ.ನಂ 03 ಕ್ಷೇತ್ರ 508ಎಕರೆ 20 ಗುಂಟೆ ಇದರ ಕಾಲಂ ನಂ11ಹಾಗೂ 2ರಲ್ಲಿ ಊರಿನ ಎಲ್ಲ ಜನರು ಎಂದು ದಾಖಲಾಗಿದೆ.

ಆದರೆ ಇದಕ್ಕೆ ಪೂರಕವಾಗಿ ಖಾನಾಪೂರ ತಹಶೀಲ್ದಾರರು ಸರಕಾರದ ನಿಯಮ ಗಾಳಿಗೆ ತೂರಿ ಪಹಣಿ ಪತ್ರದಲ್ಲಿ ದಾಖಲಿರುವ ಊರಿನ ಎಲ್ಲ ಜನರು ಎಂಬ ಹೆಸರು ಕಡಿಮೆ ಮಾಡಲು ಆದೇಶ ಮಾಡುವುದರ ಮೂಲಕ ಗಂಭೀರವಾದ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪವನ್ನು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾಡ ಅವರು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಡಿದರು.

ಇದಕ್ಕೆ ಸಂಬಂಧಿಸಿದಂತೆ ಖಾನಾಪೂರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಅವರು ಸ್ಪಷ್ಟತೆಯನ್ನು ನೀಡಿದ್ದು ಭೀಮಪ್ಪ ಗಡಾಡ ಅವರು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ

ನಾವು ನ್ಯಾಯಾಲಯದ ಆದೇಶದ ಪಾಲಿಸಿದ್ದೆವೆ ಮಾನ್ಯ ನ್ಯಾಯಾಲಯದ ಆದೇಶದಂತೆ ಯಾವುದೇ ಮ್ಯುಟೇಶನ್ ಇಲ್ಲದೇ ತಾಲೂಕಿನ ಜಾಂಬೋಟಿಯ ಹುಳಂದ ಗ್ರಾಮಕ್ಕೆ ಸೇರಿದ ರಿ.ಸ.ನಂ 03ಪಹಣಿಯಲ್ಲಿ ಪೋಕಳಾಗಿ ನಮೂದಾಗಿರುವುದನ್ನು ಕಾನೂನು ಪ್ರಕಾರ ಕಡಿಮೆ ಮಾಡಲಾಗಿದೆ ಇದರಲ್ಲಿ ಯಾವುದೇ ಕರ್ತವ್ಯ ಲೋಪ ಎಸಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button