ರಾಜಕೀಯರಾಜ್ಯಹುಬ್ಬಳ್ಳಿ

ಸಾಮಾಜಿಕ ಜಾಲತಾಣಗಳಲ್ಲಿ ರೌಡಿಸಂ ಗೆ ಪ್ರಚೋದನೆ ನೀಡಿದರೆ ಕ್ರಮ; ಕಮಿಷನರ್ ಎನ್.ಶಶಿಕುಮಾರ್

ಸಾಮಾಜಿಕ ಜಾಲತಾಣಗಳನ್ನ ರೌಡಿಸಂ ಗೆ ಪ್ರಚೋದನೆ ನೀಡುವ ಹಾಗೂ ರೌಡಿಶೀಟರ್ ಗಳ ತಮ್ಮ ವೈಭವಕ್ಕೆ ಉಪಯೋಗಿಸಿಕೊಳ್ತಾ ಇದ್ದರೋ ಮೇಲೆ ನಿಗಾ ಇಟ್ಟು
28 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದೇವೆ ಹುಬ್ಬಳ್ಳಿ ಧಾರವಾಡ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ಈ ಪ್ರಕರಣಗಳಲ್ಲಿ 58 ರೌಡಿ ಶೀಟರ್ ಗಳನ್ನ ಗುರಿಯಾಗಿಸಿಕೊಂಡಿದ್ದೇವೆ. 700 ಸಾಮಾಜಿಕ ಜಾಲತಾಣಗಳ ಖಾತೆಗಳನ್ನ ಅಳವಡಿಸಿಕೊಂಡಿದ್ದೇವೆ ಕಾಮೆಂಟ್ ಗಳನ್ನ ಸಹ ಪರಿಶೀಲನೆ ನಡೆಸಿದ್ದೇವೆ
ತಲ್ವಾರ್ ಸೇರಿ ಆಯುಧಗಳನ್ನ ಇಟ್ಟುಕೊಂಡು ವ್ಯಯಕ್ತಿಕ ವೈಭವಿಕರಣ ಮಾಡುವಂತವರ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದರು.

ಯುವ ಸಮುದಾಯಗಳನ್ನ ಅಪರಾಧ ಜಗತ್ತಿಗೆ ಸೆಳೆಯುವಂತೆ ಮಾಡುವುದು. ಪ್ರತಿಭಟನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೆಂಬಲಿಗ ಪಡೆ ಮಾಡಿಕೊಂಡು ಭಯ ಪಡಿಸುವ ವಾತಾವರಣ ಸೃಷ್ಟಿ ಮಾಡುವುದು ಶಾಲಾ-ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುವುದು ಹು-ಧಾ ಕಾನೂನು-ಸುವ್ಯವಸ್ಥೆಯ 15 ಠಾಣೆಗಳಲ್ಲಿ ಒಟ್ಟು 28 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದರು.

ಇನ್ಸ್ಟಾಗ್ರಾಮ್, ಫೇಸ್ ಬುಕ್, ಯುಟ್ಯೂಬ್ ಗಳಲ್ಲಿ ಭಯ ಹುಟ್ಟಿಸುವ ಕ್ರಿಯೆ ಮಾಡಿದ್ದಾರೆ ಎಂಬ ಹಿನ್ನೆಲೆ ದಾಖಲು ಮಾಡಿಕೊಂಡಿದ್ದೇವೆ . ಇದರಲ್ಲಿ ಕೆಲವು ಪ್ರಕರಣದಲ್ಲಿ ಅರೆಸ್ಟ್ ಮಾಡುವ ಪ್ರಕ್ರಿಯೆ ಮಾಡುವುದಿದ್ದಲ್ಲಿ ಮಾಡ್ತೇವೆ. ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನ ಕ್ಲೋಸ್ ಮಾಡುವ ಕೆಲಸ ಸಹ ಮಾಡಲಾಗುತ್ತೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡೋದಕ್ಕೆ ನಮ್ಮ ಹಿರಿಯ ಅಧಿಕಾರಿಗಳು ಮಾಡ್ತಾ ಇದ್ದಾರೆ. ನಮ್ಮ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಿ ಮಾಡಿದ್ದಾರೆ. ಗೃಹ ಇಲಾಖೆಯಿಂದ ಈ ಬಗ್ಗೆ ನಿರ್ದೇಶನ ಬಂದಿತ್ತು. ಈ ಹಿನ್ನೆಲೆ ನಾವು ಕಳೆದ ಹಲವು ದಿನಗಳಳಿಂದ ಕಾರ್ಯಾಚಾರಣೆ ಮಾಡಲಾಗಿದೆ ಎಂದರು.

 

Related Articles

Leave a Reply

Your email address will not be published. Required fields are marked *

Back to top button