
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ…
ಯಾವುದೇ ಇಲಾಖೆಯ ಜವಾಬ್ದಾರಿ ನೀಡಿದರೂ ಪ್ರಾಮಾಣಿಕವಾಗಿ ನಿರ್ವಹಿಸುವೆ – ಶಾಸಕ ರಾಜು ಕಾಗೆ
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ…
ಯಾವುದೇ ಇಲಾಖೆಯ ಜವಾಬ್ದಾರಿ ನೀಡಿದರೂ ಪ್ರಾಮಾಣಿಕವಾಗಿ ನಿರ್ವಹಿಸುವೆ
ಸವದಿ ಅವರಿಗೂ ನೀಡಿದರೂ ಒಳ್ಳೆಯದು
ಶಾಸಕ ರಾಜು ಕಾಗೆ ಹೇಳಿಕೆ
ಸಂಪುಟ ವಿಸ್ತರಣೆಯಾದರೆ ತಾವು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಯಾವುದೇ ಇಲಾಖೆಯ ಜವಾಬ್ದಾರಿಯನ್ನು ನೀಡಿದರೂ ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವುದಾಗಿ ಕಾಗವಾಡ ಶಾಸಕ ರಾಜು ಕಾಗೆ ತಿಳಿಸಿದರು.
ಅವರು ಇಂದು ಕಾಗವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.ಪಂಚಮಸಾಲಿ 2 ಎ ಮೀಸಲಾತಿಗಾಗಿ ಸಮಾಜದ ಎಲ್ಲ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮುಂದಿನ ಅಧಿವೇಶನದ ವೆರೆಗೆ ಯೋಗ್ಯ ನಿರ್ಣಯ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿವೆ. ಹಿಂದೆಯೂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರಕಾರವಿದ್ದಾಗಲೂ ಮನವಿ ಮಾಡಿದ್ದೇವೆ. ಪಂಚಮಸಾಲಿ ಸಮಾಜದ ಬಡವರಿಗೆ ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲೆಂದು ಮೀಸಲಾತಿಗಾಗಿ ಆಗ್ರಹಿಸಲಾಗುತ್ತಿದೆ. ನಮ್ಮಲ್ಲಿ ಯಾವುದೇ ಒಡಕಿಲ್ಲ. ಎಲ್ಲರೂ ಒಂದಾಗಿದ್ದೇವೆ ಎಂದರು.
ಇನ್ನು ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ತಾವು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಆಗಿರುವುದಾಗಿ ತಿಳಿಸಿದರು. ಅಲ್ಲದೇ ಶಾಸಕ ಲಕ್ಷ್ಮಣ ಸವದಿ ಹಿರಿಯರಾಗಿದ್ದು, ಅವರಿಗೂ ಸಚಿವ ಸ್ಥಾನ ನೀಡಿದರೇ ಯಾವುದೇ ತಪ್ಪಿಲ್ಲ ಎಂದರು.
ಇನ್ನು ಸಿದ್ರಾಮೋತ್ಸವ ಕಾರ್ಯಕ್ರಮದ ವಿರುದ್ಧ ಎ ಐ ಸಿ ಸಿ ಗೆ ದೂರು ನೀಡಿದ ವಿಚಾರವಾಗಿ ತಮಗೆ ಮಾಹಿತಿಯಿಲ್ಲ ಎಂದರು.