ಬೆಳಗಾವಿ
ಹೈಕೋರ್ಟ್ ತಡೆಯಾಜ್ಞೆ ತರವು, ಆರಂಭಗೊಂಡ ಖಾನಾಪೂರ ಪಟ್ಟಣ ಪಂಚಾಯಿತಿ ಚುನಾವಣಾ ಪ್ರಕ್ರಿಯೆ.

ಹೈಕೋರ್ಟ್ ತಡೆ ಆಜ್ಞೆ ತೆರವುಗೊಂಡಿದ್ದರಿಂದ ಖಾನಾಪುರ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ.
ಮೀಸಲಾತಿ ಪ್ರಕಾರ ಖಾನಾಪೂರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಯರಿಗೆ ಮೀಸಲಿದೆ. ಇದರಿಂದ ಮಹಿಳಾ ಸದಸ್ಯರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಈಗಿರುವ ಮಾಹಿತಿಯ ಪ್ರಕಾರ ಸದಸ್ಯೆ ಮೀನಾಕ್ಷಿ ಬೈಲೂರಕರ ಅವರು 14 ಸಂಖ್ಯಾಬಲದ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಬಲ್ಲ ಮೂಲಗಳ ಪ್ರಕಾರ ಮೀನಾಕ್ಷಿ ಪ್ರಕಾಶ್ ಬೈಲೂರಕರ ಇವರು ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಜಯಾ ಭುತಕಿ ಆಯ್ಕೆ ಆಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಒಂದು ವರ್ಷದಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಖಾನಾಪೂರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಪ್ರಕರಣ ಇಂದು ಕೋರ್ಟ್ ಆದೇಶ ಪ್ರಕಾರ ಸುಖಾಂತ್ಯಗೊಂಡಿದ್ದರಿಂದ ಚುನಾವಣೆ ನಡೆದು ನೂತನ ಅಧ್ಯಕ್ಷ ಉಪಾಧ್ಯಕ್ಷರಿಂದ ಜನರಿಗೆ ಸೇವೆ ದೊರೆಯಲಿದೆ.