ಹೈಕಮಾಂಡ್ ಭೇಟಿಗೆರಮೇಶ್ ಜಾರಕಿಹೊಳಿ ಯತ್ನಾಳ್ ತಂಡ ರೆಡಿ

ಬೆಳಗಾವಿ, (ಡಿಸೆಂಬರ್ 01): ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಬಣ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಯತ್ನಾಳ್ ತಂಡದ ವಿರುದ್ಧ ಶಿಸ್ತು ಕ್ರಮ ಜರುಗಿಸವಂತೆ ಹೈಕಮಾಂಡ್ಗೆ ಒತ್ತಾಯಿಸಲು ತೀರ್ಮಾನಿಸಿದೆ. ವಕ್ಫ್ ವಿಚಾರ ಇಟ್ಟುಕೊಂಡೇ ವಿಜಯೇಂದ್ರ ವಿರುದ್ಧ ರಣಕಹಳೆ ಮೊಳಗಿಸಿರುವ ಯತ್ನಾಳ್ ತಂಡ, ಇದೀಗ ದಾವಣಗೆರೆ ಸಮಾವೇಶಕ್ಕೆ ತಿರುಗೇಟು ನೀಡಲು ತಯಾರಾಗಿದೆ. ಹೌಡು…ಅದೇ ದಾವಣಗೆರೆಯಲ್ಲಿ ಹಿಂದೂಗಳು ಸಮಾವೇಶ ಮಾಡಲು ಮುಂದಾಗಿದೆ. ಇದರೊಂದಿಗೆ ಮತ್ತಷ್ಟು ಬಣ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆಗಳಿವೆ.
ವಕ್ಫ್ ವಿರುದ್ಧ ಜನಜಾಗೃತಿ ಸಮಾವೇಶಕ್ಕೆ ಹಣ ನೀಡುವುದಾಗಿ ಹಲವರು ಘೋಷಣೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ 1 ಕೋಟಿ ರೂ, ಘೋಷಿಸಿದ್ದಾರೆ. ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ 1 ಕೋಟಿ ಹಣ ನೀಡುತ್ತೇವೆ. ರೈತರು, ಮಠ ಮಂದಿರ, ಸರ್ಕಾರಿ ಶಾಲೆ ಆಸ್ತಿ ಉಳಿಸಲು ನಮ್ಮ ಹೋರಾಟ. ದಾವಣಗೆರೆಯ ಸಮಾವೇಶಕ್ಕೆ ಪ್ರಧಾನಿ ಮೋದಿ ಕರೆಸುವ ಚಿಂತನೆಯಿದೆ.ದಾವಣಗೆರೆ ಸಮಾವೇಶಕ್ಕೆ 25 ಲಕ್ಷ ಜನರನ್ನು ಸೇರಿಸಲು ಚಿಂತಿಸಿದ್ದೇವೆ.ಜನರ ಹಣ ಲೂಟಿ ಮಾಡಿ ದುಬೈ, ಮಾರಿಷಸ್ನಲ್ಲಿ ಆಸ್ತಿ ಮಾಡಿದ್ದಾರೆ. ಗುಟ್ಟಾಗಿ ಆಸ್ತಿ ಮಾಡಿದವರು ಮೃತಪಟ್ಟರೆ ಅದು ಕಂಡವರ ಪಾಲಾಗುತ್ತೆ ಎಂದರು.
ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಆದರೆ ಅಷ್ಟೇ. ನಿಮ್ಮ ಕಣ್ಮುಂದೆಯೇ ಜಮ್ಮು-ಕಾಶ್ಮೀರ ಮತ್ತು ಕೇರಳ ಇದೆ. ಯಾರನ್ನೋ ಸಿಎಂ ಮಾಡಲು ನಾವು ಹೋರಾಟ ಮಾಡುತ್ತಿಲ್ಲ. ನನ್ನ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಬಂದ್ ಮಾಡಿಸಿದ್ದಾರೆ. ನಾನು ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನನ್ನ ಮೇಲೆ ಈವರೆಗೆ 42 ಕೇಸ್‌ಗಳನ್ನು ಹಾಕಿದ್ದಾರೆ. ಇಷ್ಟೆಲ್ಲಾ ಇರುವಾಗ ಯಾರಾದ್ರು ಹೊಂದಾಣಿಕೆ ಎಂದು ಹೇಳ್ತಾರಾ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿ ಹೋಗಿಲ್ಲ. ವಿಧಾನಸೌಧದಲ್ಲಿ ಹೇ ಯತ್ನಾಳ್ ಎಂದು ಡಿ.ಕೆ.ಶಿವಕುಮಾರ್ ಕರೆದ. ಅವತ್ತೇ ಯಾಕಲೇ ಮಗನೇ ಎಂದು ನಾನು ಡಿಕೆಗೆ ಕರೆದಿದ್ದೆ ಎಂದು ಗುಡುಗಿದರು. ಈ ಮೂಲಕ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ಕೊಟ್ಟರು.ಅತ್ತ ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದರೆ, ಇತ್ತ ಯತ್ನಾಳ್ ತಂಡ ಬೆಳಗಾವಿಯಲ್ಲಿ ರಹಸ್ಯ ಸಭೆ ನಡೆಸಿದ್ದು, ಮುಂದಿನ ರಾಜಕೀಯ ಹೋರಾಟದ ಬಗ್ಗೆ ಚರ್ಚಿಸಿದೆ. ವಿಜಯೇಂದ್ರ ಹೊಂದಾಣಿಕೆ ದಾಖಲೆಗಳನ್ನು ಹೈಕಮಾಂಡ್ ನೀಡುವ ಜವಾಬ್ದಾರಿಯನ್ನು ಯತ್ನಾಳ್ ವಹಿಸಿಕೊಂಡಿದ್ದರೆ, ಮುಂದಿನ ರಾಜಕೀಯ ಹೋರಾಟದ ಹೊಣೆಯನ್ನು ರಮೇಶ್ ಜಾರಕಿಹೊಳಿ ಹೊತ್ತುಕೊಂಡಿದ್ದಾರೆ.