
ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡದ ಎರಡು ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳು ಸೂರತ್ ಮೂಲದವರು ಅನ್ನೋದು ತನಿಖೆಯಿಂದ ಪತ್ತೆಯಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಎನ್ ಶಶಿಕುಮಾರ್ ತಿಳಿಸಿದರು.
ಅವಳಿ ನಗರದ ಕೆಲ ಪ್ರಾರ್ಥನಾ ಮಂದಿರಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿದ್ದು, ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಸಕ ಅರವಿಂದ ಬೆಲ್ಲದ್ ಬರೆದ ಪತ್ರದ ವಿಚಾರ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.ಹುಬ್ಬಳ್ಳಿ – ಧಾರವಾಡ ನಗರ ವ್ಯಾಪ್ತಿಯ ಜನ್ನತ್ ನಗರದಲ್ಲಿ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಸ್ಥಳೀಯ ಶಾಸಕರೊಬ್ಬರು ಒಂದಿಷ್ಟು ಮಾಹಿತಿ ನೀಡಿದ್ದರು. ಮೇ 2ರಿಂದ 10ರ ನಡುವೆ ಅತಿ ಹೆಚ್ಚು ಸಿಮ್ ಕಾರ್ಡ್ ಮಾರಾಟವಾಗಿವೆ ಎಂದೂ ಹಾಗೂ ಧಾರವಾಡ ನಗರದ ವಿದ್ಯಾಗಿರಿ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಜನ್ನತ್ ಹಾಗೂ ಆರೋಗ್ಯ ನಗರ ಈ ಎರಡೂ ಪ್ರದೇಶದಲ್ಲಿ ಸ್ಥಳೀಯರು ಅಲ್ಲ ಎನ್ನುವಂತಹ ಕೆಲವು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡುತ್ತಿದ್ದಾರೆಂದು ಶಾಸಕರು ಪತ್ರ ಬರೆದು ನಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದರು.