
ಕಾಗವಾಡ: 2025-26 ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಒಂದು ತಿಂಗಳ ಕಾಲ ತಾಲೂಕಿನ 8 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ನಡೆಗೆ ಸಬಲತೆಯೆಡೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಕದ್ದು ತಿಳಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯತ ಕಚೇರಿ ಆವರಣದಲ್ಲಿ ಶುಕ್ರವಾರ ಉದ್ಯೋಗ ಖಾತರಿ ನಡೆಗೆ ಸಬಲತೆಯೆಡೆಗೆ ಅಭಿಯಾನ ನಿಮಿತ್ತ ಉದ್ಯೋಗ ವಾಹಿನಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಉದ್ಯೋಗ ವಾಹಿನಿ ರಥ ಸಂಚರಿಸಿ ಸಾರ್ವಜನಿಕರಿಗೆ ನರೇಗಾ ಯೋಜನೆಯಡಿ ದೊರೆಯುವ ಸಮುದಾಯ & ವೈಯಕ್ತಿಕ ಕಾಮಗಾರಿ ಸೌಲಭ್ಯ, ವೈಯಕ್ತಿಕ ಕಾಮಗಾರಿ ಪಡೆಯಲು ಇರಬೇಕಾದ ಅರ್ಹತೆಗಳು, ಗಂಡು ಹೆಣ್ಣಿಗೆ ಸಮಾನ ಕೂಲಿ, ಹಿರಿಯ ನಾಗರಿಕರಿಗೆ , ವಿಶೇಷ ಚೇನರಿಗೆ ಶೇ 50 ರಷ್ಟು ರಿಯಾಯತಿ ಸಿಗಲಿದೆ ಎಂದು ತಿಳಿಸಿದರು.
ಉದ್ಯೋಗ, ಆಹಾರಭದ್ರತೆ, ದರ್ಘಕಾಲ ಬಾಳಿಕೆ ಬರುವಂತಹ ಸ್ವತ್ತುಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ.ರಾಜ್ ಸಹಾಯಕ ನಿರ್ದೇಶಕ ಎ.ಡಿ.ಅನ್ಸಾರಿ, ಐಇಸಿ ಸಂಯೋಜಕ ಅಮೀತ ಇಂಗಳಗಾಂವಿ, ತಾಲ್ಲೂಕು ಪಂಚಾಯತ ಸಿಬ್ಬಂದಿಗಳಾದ ಸುರೇಶ ಕಾಂಬಳೆ, ಆದಿನಾಥ ಚೌಗಲೆ, ಪ್ರದೀಪ್ ಆದಗೊಂಡ, ಸತೀಶ ಬೆಕ್ಕೇರಿ, ಕಲಗೌಡಾ ಪಾಟೀಲ್, ಪ್ರದೀಪ, ಆನಂದ ಕಾಂಬಳೆ ಮುಂತಾದವರು ಇದ್ದರು.